ಪೊರಕೆವಿಡಿದಡಿಗಡಿಗೆ
ಮನೆಯೆಲ್ಲ ಗುಡಿಸಲೇಂ ?
ಮತ್ತದೇ ಕಸಬೀಳ್ವು
ದಿದು ಸಾಜಮಲ್ತೆ !?
ಪೊರಕೆ ಬೇಸರಿಪುದೇ
ನಡಿಗಡಿಗೆ ಗುಡಿಸಲ್ಕೆ ?
ಮನವ ಗುಡಿಸೇಳಂತೆ
ಜಾಣಮೂರ್ಖ //
ಪೊರಕೆಯನ್ನು ನಾವು ಕನಿಷ್ಟವೆಂದು ಭಾವಿಸಲಾಗದು. ಅದರಿಂದ ನಾವು ಕಲಿಯುವುದು ತುಂಬಾ ಇದೆ ಸ್ನೇಹಿತರೆ. ಅಡಿಗಡಿಗೆ ನಾವು ಮನೆಯ ಕಸವನ್ನು ಗುಡಿಸುತ್ತೇವೆ. ಸ್ವಚ್ಛಗೊಳಿಸುತ್ತೇವೆ. ಆದರೆ ಮತ್ತೆ ಮರುಕ್ಷಣವೇ ಕಸವಾಗುತ್ತದೆ. ಮತ್ತದೇ ಪೊರಕೆ ಹಿಡಿದು ಗುಡಸಿ ಕಸ ಕಳೆಯುತ್ತೇವೆ. ಆದರೇನಂತೆ ಮತ್ತದೇ ಕಸ. ಪೊರಕೆ ಬೇಸರ ಮಾಡಿಕೊಳ್ಳುತ್ತದೆಯೇನು ? ಹಾಗೆಯೇ ನಮ್ಮ ಮನಸ್ಸು ಕೂಡ. ಶುದ್ಧವಾಗೋದೂ ತಡವಿಲ್ಲ ! ಮಲಿನವಾಗೋದೂ ತಡವಿಲ್ಲ. ಪ್ರತಿ ಕ್ಷಣವೂ ಮನದ ಮಲಿನತೆಯನ್ನು ಕಳೆದು ಶುದ್ಧಿಗೈವ ಕಸಪರಕೆಯಂತಾಗಬೇಕು ನಮ್ಮ ವ್ಯಕ್ತಿತ್ವ. ಆದ ನಮ್ಮ ಅಂತರಂಗವು ನಿರ್ಮಲವಾಗಿರುತ್ತದೆ. ಏನಂತೀರಿ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021