ಬಾಳ ಗುರಿಗಿರೆ ಬೆಲೆಯು
ಬದುಕಿಗಿದೆ ಬೆಲೆಯು ತಾಂ
ಬೆಲೆಯ ಮೀರಿದ ಸತ್ಯ
ಗುರಿಯಾಗೆ ಧನ್ಯ !
ಜಗದ ಮೂಲಕೆ ಮಣಿಯೊ
ನಿಷ್ಕಾಮ ಭಕ್ತಿಯೊಳ
ಗಿದಕಿಂತ ಗುರಿಯೇನೊ
ಜಾಣಮೂರ್ಖ//
ಉತ್ತಮ ಗುರಿಯಿದ್ದರೆ ಈ ಬದುಕಿಗೆ ಬೆಲೆಯು ತಾನಾಗಿಯೇ ಬರುತ್ತದೆ. ಮನುಷ್ಯ ಎಲ್ಲಕ್ಕೂ ಬೆಲೆ ಕಟ್ಟಿಬಿಟ್ಟಿದ್ದಾನೆ. ಭೂಮಿಯನ್ನೇ ಬಿಟ್ಟಿಲ್ಲ !! ಚದುರ ಅಡಿಗೆ ಇಷ್ಟೆಂದು ಲೆಕ್ಕ ಹಾಕುವ ಈ ಮಿಥ್ಯ ಪರಿಪಾಟಕ್ಕೆ ಏನೆನ್ನಬೇಕು ! ಆದರೆ ಬೆಲೆಕಟ್ಟಲಾಗದ ಸತ್ಯವೇ ಗುರಿಯಾದಾಗ ಬದುಕಿಗೊಂದು ಸುಂದರ ಮೆರುಗಿದೆ, ಅಂತಹಾ ಜೀವನವೇ ಧನ್ಯ ಕಣಯ್ಯ ಗೆಳೆಯ. ಬದುಕಿನ ಪ್ರತಿಹೆಜ್ಜೆಯಲ್ಲೂ ಮುಂದೆ ಬಂದೊದಗಬಹುದಾದ ಕಷ್ಟಗಳ ಬಗ್ಗೆ ಚಿಂತಿಸಿ, ಅರಿತು ಅಡಿಯಿಡಬೇಕು. ಈ ಜಗತ್ತಿನ ಅಸ್ತಿತ್ವಕ್ಕೆ ಮೂಲವಾವುದೆಂಬ ಪರಮಸತ್ಯವನ್ನು ಅರಿತು ನಿಷ್ಕಾಮ ಭಕ್ತಿಯಿಂದ ಆ ದಿವ್ಯ ಭವ್ಯ ಶಕ್ತಿಗೆ ಮಣಿಯಬೇಕು. ಆಗ ಸಹಜವಾಗಿಯೇ ನಮ್ಮಲ್ಲಿ ನಿರ್ಮೋಹ , ನಿರ್ಲಿಪ್ತತೆ , ನಿಷ್ಕಾಮತ್ವಗಳು ಉಂಟಾಗುತ್ತವೆ. ಇದಕ್ಕಿಂತಲೂ ಸಂತಸದ ಬದುಕುಂಟೆ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021