ತನುಮನವ ಸಂತೈಸ
ಲೇನೇನ ಗೈದಪೆವೊ!
ತನುಮನವನಿತ್ತವರಿ
ಗೇನನಿತ್ತಿಹೆವೊ !?
ತನುವಿಗನ್ನವನಿಕ್ಕಿ
ಮನಕೆ ಸಂಸ್ಕಾರವನು
ನೀಡುವರ್ಗೆದ್ದು ಮಣಿ
ಜಾಣಮೂರ್ಖ//
ಈ ಶರೀರ ಮತ್ತು ಈ ಮನಸ್ಸುಗಳನ್ನು ಸಂತೈಸಲು ನಾವು ಏನೇನೆಲ್ಲಾ ಮಾಡುತ್ತೇವೆ ! ಆದರೆ ಈ ಶರೀರವನ್ನಿತ್ತವರಿಗೆ ಏನು ಕೊಟ್ಟಿದ್ದೇವೆ ? ಮನಸ್ಸಿನಲ್ಲಿ ಸಂಸ್ಕಾರವೆಂಬ ಬೀಜವನ್ನು ಬಿತ್ತಿ ,ಬೆಳೆಸಿ ಹೆಮ್ಮರವಾಗಿಸಿ ನಮಗೊಂದು ಸುಂದರ ವ್ಯಕ್ತಿತ್ವವನ್ನು ನೀಡಿದ ತಂದೆ ತಾಯ್ಗಳಿಗೆ, ಗುರುಗಳಿಗೆ ಏನು ಕೊಟ್ಟಿದ್ದೇವೆ ? ಸ್ವಲ್ಪ ನಾವೆಲ್ಲಾ ಯೋಚಿಸಬೇಕಲ್ಲವೇ ? ಅವರಿಗೆ ನಾವು ಏನೂ ಕೊಡುವುದು ಬೇಡ. ಸಂತೋಷವನ್ನು ಕೊಟ್ಟರಷ್ಟೇ ಸಾಕು. ಅವರು ಬಯಸುವುದಷ್ಟೇ. ಅವರಿಗೆ ಎದ್ದು ನಿಂತು ಗೌರವಿಸೋಣ. ಅವರಿಗೆ ಮಣಿದೇ ನಡೆಯೋಣ. ಅವರು ಮುದುಕರೆಂದು ಕಡೆಗಣಿಸದೆ ಮನ್ನಣೆ ನೀಡಬೇಕು. ಎಲ್ಲವನ್ನೂ ಬಲ್ಲವರು ಅವರು. ಬಲ್ಲವರೊಡನೆ ಬಿಲ್ಲಾಗಿರಬೇಕಲ್ಲವೇ ? ಆಗಲೇ ಬದುಕು ಸಾರ್ಥಕ. ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021