ಹರಿವ ವಾಹಿನಿಯವೊಲು
ಸರಿಯುತಿಹುದೀ ಬಾಳು
ನಿಲದು ತಾನೆಲ್ಲು ತಿಳಿ
ನಿಲಲು ಮಲೆಯುವುದು !
ಮಲಯಲೇತಕೆ ನೂರು
ಬರಿಸಂಗಳಾಯುಷ್ಯ
ತಪವೆ ಪರಿತಪಿಪುದಕೆ
ಜಾಣಮೂರ್ಖ
ನಮ್ಮ ಜೀವನ ಒಂದು ಸುಂದರವಾದ ನದಿಯಂತೆ ಹರಿಯುತ್ತಲೇ ಇರಬೇಕು. ನದಿಎಲ್ಲಾದರೂ ನಿಲ್ಲುತ್ತದೆಯೇ ? ನಿಂತರೆ ಮಲೆಯುತ್ತದೆ. ನಮ್ಮ ಬದುಕೂ ಅಷ್ಟೆ. ನಿಂತರೆ ಮಲೆತು ದುರ್ಗಂಧ ಬೀರುತ್ತದೆ. ನಮ್ಮ ಬಗ್ಗೆ ನಮಗೇ ಅಸಹ್ಯ ತರಿಸುತ್ತದೆ. ಹೀಗೆ ಮಲೆತು ಅಸಹ್ಯವಾಗಿ ಬದುಕುವುದಕ್ಕಾಗಿ ಭಗವಂತನು ನಮಗೆ ನೂರು ವರ್ಷಗಳ ಆಯುಷ್ಯವನ್ನು ಕೊಟ್ಟನೇನು ? ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸಿ. ಬದುಕಿನ ತುಂಬ ಪರಿತಾಪ ಪಡುವುದಕ್ಕಾಗಿ ನಾವು ಬದುಕನ್ನೇ ತಪಸ್ಸಿನಂತೆ ಕಳೆಯುತ್ತಿದ್ದೇವೆ. ನಿರಂತರ ಪ್ರಯತ್ನಗಳ ಫಲಶ್ರುತಿ ಮುಂದಿನ ದುಃಖದ ಹೇತುವಾದರೆ ಏನು ಫಲ ಹೇಳಿ ? ಈ ದುಃಖ ಸಂಪಾದನೆಗಾಗಿ ತಪಸ್ಸೆ ? ಅಜ್ಞಾನದ ಪರಮಾವಧಿಗೆ ಇದಕ್ಕಿಂತ ಸಾಕ್ಷಿ ಬೇಕೆ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021