ಮೊದಲೆಲ್ಲಾ ತಾನೇ ಬಂದು ಮೈ ಮೇಲೆ ಕುಳಿತು ನಿವಾರಿಸಲು ಬಿಡುತ್ತಿದ್ದ ಮಿಯಾ, ದಿನ ಹೋದಂತೆ ಸಂಕೋಚ ತೋರಿಸುತ್ತಿತ್ತು. ದೂರ ಓಡುತ್ತಿತ್ತು. ತಿನ್ನಲು ಬೇಕಾದರೆ ಮಾತ್ರ ನನ್ನದೇ ಹಕ್ಕು ಎನ್ನುವಂತೆ ಜೋರು ಮಾಡಿ ಕೇಳುತ್ತಿತ್ತು. ನಮ್ಮ ಇಡೀ ನಡುಮನೆ ಮತ್ತು ಡೈನಿಂಗ್ ಹಾಲ್ ಅದರದಾಗಿತ್ತು. ನಮಗೆ ಕೂರಲೂ ಅದು ಹಿಕ್ಕೆ ಹಾಕದ ಸ್ಥಳವಿರಲಿಲ್ಲ.
ಅಷ್ಟೇ ಅಲ್ಲ, ಯಾವಾಗಲೂ ಕಿಟಕಿಯ ಬಳಿ ಕುಳಿತು ಹೊರ ನೋಡುವುದನ್ನು ನೋಡುವಾಗ ಅದರ ಮನಸ್ಸು ಹೊರಗಿನ ಪ್ರಪಂಚದಲ್ಲಿತ್ತು ಎಂಬುದು ಗೊತ್ತಾಗುತ್ತಿತ್ತು. ತಾನೇ ತಿನ್ನಲು ಬರುತ್ತದೆ. ಇನ್ನು ಹೇಗೋ ಬದುಕಬಹುದು. ೧೪ ದಿನ ಹೇಗೋ ನೋಡಿಕೊಂಡು ಆಗಿದೆ. ನಮ್ಮ ಕೈಲಿ ಆಗಿದ್ದು ಮಾಡಿಯಾಗಿದೆ. ಇನ್ನು ಸ್ವತಂತ್ರವಾಗಿ ಬಿಡೋಣ ಎಂದು ನಿರ್ಧರಿಸಿದೆವು. ಬೆಳಿಗ್ಗೆ ಎದ್ದು, ಒಮ್ಮೆ ಹಣ್ಣು ತಿನ್ನಿಸಿ, ತೆಗೆದುಕೊಂಡು ಹೋಗಿ ನಮ್ಮ ಹಿತ್ತಲಿನಲ್ಲಿ ಹಕ್ಕಿಗಳಿಗೆ ಕಾಳು ಕೊಡಲು ಇಟ್ಟುಕೊಂಡಿದ್ದ ಹಕ್ಕಿ ಗೂಡಿನಲ್ಲಿ ಬಿಟ್ಟರೆ, ಸ್ವಲ್ಪ ಹೊತ್ತು ಆಶ್ಚರ್ಯದಿಂದ ಆಚೀಚೆ ನೋಡಿ ನನ್ನ ಮಗಳ ತಲೆ ಮೇಲೆ ಬಂದು ಕೂತು ಹಿಕ್ಕೆ ಹಾಕುವುದೇ? ಆಮೇಲೆ ಹಕ್ಕಿಗಳಿಗೆ ನೀರು ಕುಡಿಯಲ್ಲೂ ಇಟ್ಟಿದ್ದ ಪಾತ್ರೆಯೊಳಗೆ ಹಾರಿ ಸ್ನಾನ ಮಾಡಿ, ಮೈ ಕೊಡಕಿಕೊಂಡು ಪೊದೆಗಳ ಸಂದಿಯಲ್ಲಿ ಮಾಯವಾಯಿತು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020