ಬಯಸಲೇತಕೆ ಬರಿಯ
ದುಃಖಗಳ ಸರಮಾಲೆ
ಸಂತಸದ ಸಾಮ್ರಾಜ್ಯ
ಹೃದಯ ತುಂಬಿರಲು !
ಗುರಿಹಲಗೆಯೇನೆದೆಯು
ಸದೆ ಮನದ ಲೋಭಗಳ
ಸಾನಂದದಲಿ ಬದುಕೊ
ಜಾಣಮೂರ್ಖ //
ಇದೆಂತಹಾ ವಿಪರ್ಯಾಸವೆಂದರೆ ಈ ಭುವಿಗೆ ಸಂತೋಷವಾಗಿರಲು ಬಂದಿರುವ ನಾವು ಬರಿಯ ದುಃಖಗಳ ಸರಮಾಲೆಯನ್ನೇ ಬಯಸಿ , ಸೃಷ್ಟಿಸಿಕೊಂಡು ಅದರಲ್ಲೇ ನರಳುತ್ತೇವೆ. ಅನಂತ ಸಂತಸದ ಸಾಮ್ರಾಜ್ಯವು ನಮ್ಮ ಹೃದಯದಲ್ಲೇ ಇದೆ. ಆದರೂ ನಮ್ಮ ಹೃದಯವನ್ನು ನೋವೆಂಬ ಬಾಣಗಳಿಗೆ ತಾಗುವ ಗುರಿಹಲಗೆಯಾಗಿಸಿಕೊಳ್ಳುತ್ತೇವೆ. ಇರುಳು ಕಂಡ ಕೂಪಕ್ಕೆ ಹಗಲೇ ಬೀಳುತ್ತೇವೆ. ಮನಸ್ಸೇನು ಗುರಿಹಲಗೆಯೇ ? ಆಸೆಗೂ ಒಂದು ಮಿತಿಯಿರಬೇಕು. ಆನಂದ , ಶಾಂತಿ ನೆಮ್ಮದಿಗಳಿಂದ ಬದುಕಲು ಮನದ ಲೋಭಗಳನ್ನು ಸದೆಬಡಿಯಬೇಕು. ಆಗ ನೋಡಿ ಬದುಕು ಹೇಗಿರುತ್ತದೆ ಎಂದು ! ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021