ಮಹಾಭಾರತದಲ್ಲಿ ದುರ್ಯೋಧನ ಶಕುನಿಯು ನುಡಿಯುವ ಮಾತುಗಳ ಮೇಲೆ ನಂಬಿಕೆ ಇಟ್ಟಿದ್ದನು.
ಆತನೇ ತನ್ನ ಬದುಕಿನ ಸದ್ಗತಿಗೆ ಕಾರಣವೆಂದು ನಂಬಿದ್ದ. ಪರಿಣಾಮವಾಗಿ ಕುಟಿಲತೆ, ದುರಹಂಕಾರ ತನ್ನ ಬದುಕಾಗಿಸಿಕೊಂಡಿದ್ದ. ತನ್ನ ಕನಸಿನ ಹಸ್ತಿನಾಪುರದ ರಾಜನಾಗುವುದಕ್ಕೆ ಇದುವೇ ಸನ್ಮಾರ್ಗವೆಂದು ನಂಬಿದ್ದ..
ಇನ್ನೊಂದೆಡೆ ಯುಧಿಷ್ಠಿರ ಸತ್ಯ, ಧರ್ಮಗಳ ಮೇಲೆ ನಂಬಿಕೆ ಇಟ್ಟಿದ್ದನು. ಸಹನೆಯ ಹಾದಿಯಲ್ಲಿ ಕ್ರಮಿಸಿದನು. ಈತ ಕೋಪಗೊಂಡಿದ್ದು, ತಾಳ್ಮೆ ಕಳೆದುಕೊಂಡಿದ್ದು ಮಹಾಭಾರತದ ಯಾವ ಪುಟದಲ್ಲಿಯೂ ಉಲ್ಲೇಖವಾಗಿಲ್ಲ!
ಇದರ ಪರಿಣಾಮವೇ ಹಸ್ತಿನಾಪುರದ ರಾಜಾಸನದ ಮೇಲೆ ಯುಧಿಷ್ಠಿರ ಆಸೀನನಾದನು.. ಸಹನೆಗೆ ಗೆಲುವಿದೆ ಎಂಬುದನ್ನು ತೋರಿಸಿದನು.. ಸತ್ಯ ಪಾಲನೆಯಿಂದ ಧರ್ಮರಾಯ ಎಂದು ಹೆಸರಾದನು.. ತನ್ನ ನ್ಯಾಯದ ಹಾದಿಯಲ್ಲಿ ಸಾಕಷ್ಟು ನೋವುಂಡರೂ ಕೊನೆಗೆ ಲಭಿಸಿದ ನೈಜ ಜಯದ ಸ್ವಾದವನ್ನು ಅನುಭವಿಸಿದ..
“ಇದನ್ನು ಇತಿಹಾಸ ಎನ್ನುವುದಕ್ಕಿಂತ ಸತ್ಯಕ್ಕೆ ಒಲಿದ ಜಯ ಎನ್ನಬಹುದು.”
ಈ ಘಟನೆಯನ್ನು ನಾವು ಇಂದಿಗೆ ಆದರ್ಶವಾಗಿಟ್ಟುಕೊಂಡು ಅವಲೋಕಿಸಿದಾಗ ನಾವು ಅರಿತುಕೊಳ್ಳಬೇಕಾದುದು ಏನೆಂದರೆ ಕೋಪ, ಅಸಹನೆ, ಅಪನಂಬಿಕೆ, ದ್ವೇಷಗಳು, ನಿಂದನೆಗಳು ನಮ್ಮನ್ನು “ಕನಸಿನ ಅಧಿಕಾರದಿಂದ” ದೂರಕ್ಕೆ ತಳ್ಳುತ್ತವೆ.
ತಾಳ್ಮೆ, ಪ್ರೀತಿ, ಸಹನೆಗಳು, ನಿಸ್ವಾರ್ಥ,ತ್ಯಾಗ,ಸಹಬಾಳ್ವೆಯು ನಮ್ಮನ್ನು ಅಧಿಕಾರಕ್ಕೆ ಸ್ವಾಗತಿಸುತ್ತವೆ..
ಆಯ್ಕೆ ಮಾತ್ರ ನಮ್ಮದಾಗಿರುತ್ತದೆ ಅದು “ನಾವು ದುರ್ಯೋಧನನೇ ಅಥವಾ ಯುಧಿಷ್ಠಿರನೇ?” ಎನ್ನುವುದು!
ರಾಮಚಂದ್ರ ಸಾಗರ್
- ಯಾವುದು ಸತ್ಕಾರ್ಯ? - June 7, 2020