ಹೂವಿನಂತಿರೆ ಬದುಕು
ಸೌರಭವ ಚೆಲ್ಲುವುದು
ದೀಪವಾಗಿಸಿ ಬೆಳಗೆ
ಬೆಳಕು ಹರಡುವುದು
ಒಳಿತಿರಲು ಸತ್ಫಲವು
ಕಡುಕಿರಲು ದುಷ್ಫಲವು
ಜೀವನದ ಪಯಣದೊಳು
ಜಾಣಮೂರ್ಖ //
ಸ್ನೇಹಿತರೇ, ಈ ಬದುಕು ಹೇಗಿರುತ್ತೆ ಎಂದರೆ ನೀವು ಹೂವಿನಂತಿದ್ದರೆ ಹೂವು ಸೌರಭವ ಚಲ್ಲುತ್ತಾ ಎಲ್ಲರ ಮನವನ್ನೂ ಹೇಗೆ ಗೆಲ್ಲುವುದೋ ಹಾಗೆ ನೀವೂ ಸಹ ಎಲ್ಲರ ಮನವನ್ನೂ ಗೆಲ್ಲುವಿರಿ. ನಮ್ಮ ಹೂವಿನಂತಹ ಗುಣವೇ ನಮ್ಮನ್ನು ಹೂವಾಗಿಸುತ್ತದೆ. ಒಂದುವೇಳೆ ನಿಮ್ಮ ಬದುಕನ್ನು ದೀಪವಾಗಿಸಿದರೆ ನೀವೂ ಸಹ ಸುಜ್ಞಾನದ ಬೆಳಕನ್ನು ಚೆಲ್ಲತ್ತಾ ನಿಮ್ಮ ಸುತ್ತಲೆಲ್ಲಾ ದೇದೀಪ್ಯಮಾನರಾಗಿ ಬೆಳಗುತ್ತೀರಿ ! ಇಷ್ಟೇ ಬದುಕು. ಒಳಿತಿಗೆ ಸತ್ಫಲವಿದ್ದರೆ ಕೆಡುಕಿಗೆ ದುಷ್ಫಲವಿರುತ್ತದೆ. ಈ ಜೀವನದ ಪಯಣವೇ ಹೀಗೆ. ಏಕೆಂದರೆ ಈ ಬದುಕಿನಲ್ಲೆಲ್ಲವೂ ದೈವ ನಿಯಾಮಕ, ಸೂತ್ರ ಬದ್ಧ ! ನೀನೆಂತೋ ದೇವನಂತೆ ! ತುಂಬಾ ಹಾವಳಿ ಮಾಡೋ ಮಕ್ಕಳಿಗೆ ಮನೆಯಲ್ಲಿ ಹಿರಿಯರು ಏನು ಮಾಡುತ್ತಾರೆ ಹೇಳಿ !? ಹಾಗೇ ಇಲ್ಲೂ ಕೂಡ. *ಮಾಡಿದ್ದುಣ್ಣೋ ಮಹರಾಯ* ಎನ್ನುವರಲ್ಲಾ ! ಹಾಗೆ. ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021