ಸದ್ಧರ್ಮಿ ಸತ್ಕರ್ಮಿ
ಸನ್ಮಾರ್ಗಿಯಾದೊಡೇನ್
ಹರಿತ ಕಾಣೋ ಅಣ್ಣ
ಲೋಕದಾ ಕಣ್ಣು !
ಹೊನ್ನಸೂಜಿಯ ಕಣ್ಣಿ
ನೊಳ್ಕೂತ ಕಣವಿರಲು
ದಾರ ತೂರುವುದೇನೊ
ಜಾಣಮೂರ್ಖ //
ಸ್ನೇಹಿತರೇ, ನಾವು ಸದ್ಧರ್ಮಿಗಳೇ ಆಗಿರಲಿ, ಸನ್ಮಾರ್ಗಿಗಳೇ ಆಗಿರಲಿ,ಸತ್ಕರ್ಮಿಗಳೇ ಆಗಿರಲಿ ಈ ಲೋಕದ ಕಣ್ಣು ಮಾತ್ರ ಬಹಳ ತೀಕ್ಷ್ಣವೂ, ಹರಿತವೂ ಆಗಿದೆ. ಬಂಗಾರದ ಸೂಜಿಯಾದರೇನು !? ಒಂದು ಸಣ್ಣ ಕಣವು ಅದರ ಕಣ್ಣಿನಲ್ಲಿ ಕೂತರೂ ಹೇಗೆ ದಾರ ತೂರುವುದಿಲ್ಲವೋ ಹಾಗೆ ಬದುಕಿನಲ್ಲಿ ನಾವು ಎಷ್ಟೇ ಪ್ರಾಮಾಣಿಕರಾಗಿದ್ದರೂ ಸಹ ನಮ್ಮ ಒಂದು ಸಣ್ಣತಪ್ಪು ಬದುಕನ್ನೇ ದಾರಿತಪ್ಪಿಸಬಹುದು. ಆದ್ದರಿಂದ ಹೆಜ್ಜೆ ಹೆಜ್ಜೆಗೂ ಎಚ್ಚರದಿಂದಿರಬೇಕು. ಒಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಹತ್ತುಬಾರಿ ಯೋಚಿಸಬೇಕು. *ಚಿಂತನಶೀಲತೆ ಸಾರ್ಥಕ* *ಜೀವನದ ಲಕ್ಷಣ* ಏನಂತೀರಿ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021