ಮಾತಿನೊಳು ತುಂಬಿರಲು
ವೈರಾಗ್ಯದೊಳಹುಗಳು
ಕೃತಿಯೊಳಗೆ ಬಾರದಿರೆ
ಉದರವೈರಾಗ್ಯ !
ನಿನ್ನ ನೀನರಿಯದಲೆ
ಪರರನೊರೆಯುವುದೇಕೆ ?
ಜ್ಞಾನ ಶೈಥಿಲ್ಯವದು
ಜಾಣಮೂರ್ಖ//
ನಾವು ಕೆಲವೊಮ್ಮೆ ಅತ್ಯಂತ ಶ್ರೇಷ್ಠ ವಿರಾಗಿಗಳಂತೆ ಮಾತನಾಡುತ್ತೇವೆ. ಆದರೆ ನಮ್ಮ ಹೃದಯವನ್ನೊಮ್ಮೆ ಕೇಳಿಕೊಳ್ಳೊಣ ನಾವು ಹಾಗಿದ್ದೇವೆಯೇ ? ಎಂದು. ಅಂತಹಾ ತತ್ತ್ವಗಳು ಕೇವಲ ಮಾತಿನಲ್ಲಿದ್ದು ಕೃತಿಯಲ್ಲಿ ಬಾರದೇ ಇದ್ದರೆ ಯಾವ ಪ್ರಯೋಜನವೂ ಇಲ್ಲ. ಅದು ಕೇವಲ ಹೊಟ್ಟೆಯ ಪಾಡಿನ ವೈರಾಗ್ಯವೆನಿಸಿಬಿಡುತ್ತದೆ. ನಿಜವಾಗಿ ನನ್ನನ್ನೇ ನಾನು ತಿಳಿದುಕೊಳ್ಳಲಾಗದೇ ಇತರರ ನಡೆಗಳನ್ನು ಒರೆಯಲು ಹೋಗುತ್ತೇವೆ. ಇದೆಂತಹಾ ವಿಪರ್ಯಾಸ ! ಬದುಕಿನಲ್ಲಿ ಇಂತಹಾ ವಿಪರ್ಯಾಸಗಳನ್ನೇ ಜ್ಞಾನಶೈಥಿಲ್ಯ ಎನ್ನುವುದು. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021