ಇಲ್ಲೇ ಅಡಗಿಸಿಟ್ಟಿದ್ದೆ
ನನಗೆ ದೊರಕಿದ
ಒಂದಷ್ಟು
ಸಂತಸದ ಸರಕನ್ನು
ಕಳೆದು ಹೋಗಿದ್ದು ಇಲ್ಲೇ…!
ಕಳೆದುಕೊಂಡಲ್ಲೇ
ಹುಡುಕಾಡುತಿದ್ದೇನೆ ಎಲ್ಲರ
ಮೇಲೆಯೂ
ಒಂತರಾ ಅನುಮಾನವೀಗ
ಎಲ್ಲರೂ ಪರಿಚಿತರೇ,
ಬಹಳ ಆಪ್ತರೇ ಸರಿ!
ಈಗ ಎಲ್ಲರೊಳೊಂದಾಗಿ ಕೇಳುತ್ತೇನೆ
ನಿಮಗೆ ನನ್ನ
ಖುಷಿಯನ್ನು ತುಂಬಿಟ್ಟ
ಸಂತಸದ ಒಂದಷ್ಟು
ಮೂಟೆಗಳು ಸಿಕ್ಕಿತ್ತೇ..?
ನನಗೇಕೋ
ನಿಮ್ಮ ನಗುವಲ್ಲೇ ನನ್ನ ನಗು,
ನನ್ನ ನೆಮ್ಮದಿ ನಿಮ್ಮ
ಮಾತಿನಲ್ಲಿದೆ ಅನ್ನಿಸುತ್ತಿದೆ
ಇದೆ ಎಂದಾದರೆ
ಕಂಡಿತ ಕೊಟ್ಟುಬಿಡಿ
ಆಗ…
ನಗುತ್ತಲೇ
ಮಾತನಾಡುತ್ತೀರಿ ನೀವು
ನನಗೆ ತಿಳಿಯುತ್ತದೆ
ಆಹಾ… ನನ್ನ
ಸಂತಸವೆಲ್ಲ ನಿಮ್ಮಲ್ಲೇ ಇದೆ
ನೋಡಿ ಹೇಗೆ
ಕಂಡುಹಿಡಿದಿದ್ದೇನೆ..
ಹೀಗೆ ನನ್ನ ಸಂತವನೆಲ್ಲ ಪುನಃ
ವಸೂಲಿ ಮಾಡುತ್ತೇನೆ
ಕಳೆದುಕೊಂಡಲ್ಲೇ ಹುಡುಕಿ
ಕೊನೆಗೆ
ಸಂತಸವೆಂದರೆ ಕೊಟ್ಟು ತೆಗೆದುಕೊಳ್ಳುವುದು
ಎಂದು ಮತ್ತಷ್ಟು ನಂಬುತ್ತೇನೆ
ಹಾಗೆ ನಾನೂ
ಲೂಟಿ ಮಾಡಲು ಯತ್ನಿಸುತ್ತೇನೆ
Latest posts by ಮಂಜುನಾಥ್ ಬೆಜ್ಜವಳ್ಳಿ (see all)
- ಕಳೆದುಕೊಂಡಿದ್ದು ಇಲ್ಲೇ… - June 4, 2020
- ಪುಟ್ಟ ಕತೆಗಳು… - June 3, 2020
- ಮರೆಯಾದ ಮಾಣಿಕ್ಯ…. - June 2, 2020