ತಿಂಡಿ ಅಂಗಡಿ….
ಆ ಪುಟ್ಟ ಮಗು ರಚ್ಚೆ ಹಿಡಿದು ಅಳುತ್ತಿತ್ತು. ಆ ಮಗುವಿನ ಕುಂಬದ್ರೋಣ ಮಳೆಯಂತಹ ಅಳು ನಿಂತಿರಲಿಲ್ಲ! ಬಗಲಲ್ಲಿ ತೂಕದ ಬ್ಯಾಗೊಂದನು,ಜೊತೆಗೆ ಪುಟ್ಟ ವ್ಯಾನಿಟಿಯನ್ನು ಹೊರಲಾರದೇ ಹೊತ್ತು ನಡೆಯುತ್ತಿದ್ದ ಅಮ್ಮ ಹತ್ತಿರ ತಿಂಡಿ ಅಂಗಡಿ ಎಲ್ಲಿದೆ..?
ಎಂದು ಹುಡುಕಾಡುತ್ತಿದ್ದಳು
ಕತ್ತಲು….
ಆದಿನದ ದಿನ ಸಂಜೆಯೆಂದರೆ ಎಲ್ಲರಿಗೂ ಎಂದಿನಂತೆಯೇ ಇತ್ತು. ವಿಶೇಷವೇನೂ ಇರಲಿಲ್ಲ
ಚೆಂದದ ಚೆಂಡು ಕಳೆದುಕೊಂಡ ಆ ಮಗು ಮಾತ್ರ ಎಲ್ಲಾ ಕಡೆಯೂ ಹುಡುಕಾಡುತಿತ್ತು! ಆ ಮಗುವಿನ ಮನಸ್ಸು ಬೇಗ ಕತ್ತಲಾಗುತ್ತಿದೆಯಲ್ಲಾ ಎಂದು ಒಗೊಳಗೆ ತುಂಬಾ ಚಡಪಡಿಸುತಿತ್ತು
ದಾಯಾದಿಗಳು …
ಸ್ವಾತಂತ್ರೋತ್ಸವದ ದಿನವಾಗಿದ್ದಂರಿಂದ ಆವತ್ತು ಧ್ವಜಾರೋಹಣದ ತರುವಾಯ ಶಾಲೆಯ ಎಲ್ಲಾ ಮಕ್ಕಳಿಗೂ ಸಿಹಿತಿಂಡಿಯನ್ನು ಹಂಚಲಾಯ್ತು. ಅದೇ ಶಾಲೆಯಲ್ಲಿ ಓದುತ್ತಿದ್ದ ನಿಷ್ಟುರ ದಾಯಾದಿಗಳ ಮಕ್ಕಳು ಕೊಟ್ಟ ಸಿಹಿ ತಿಂಡಿಯನ್ನು ಪರಸ್ಪರ ಹಂಚಿಕೊಂಡು ತಿಂದರು.
ಹುಲಿವೇಷ…..
ಎದುರಿಗೆ ಭಯಂಕರವಾಗಿ ಕಾಣುತ್ತಿದ್ದ ಹುಲಿವೇಷ
ಕಂಡು ಬೆದರಿದ ಪುಟ್ಟ ಮಗುವೊಂದು ಓಡಿಬಂದು
ಅಮ್ಮನ ಕೈಹಿಡಿದುಕೊಂಡಿತು! ಇದನ್ನು
ಕಂಡ ಆ ವೇಷದಾರಿ ನಗುತ್ತಲೇ ಹಿಂದೆ ಸರಿದ! ನನ್ನ ಅಮ್ಮನನು ಕಂಡೇ ಹುಲಿ ಹೆದರಿದೆಯೆಂದು,ಓಡಿ ಬಂದು ಒಳ್ಳೇಯ ಕೆಲಸ ಮಾಡಿದೆಯೆಂದು ಮಗು ಹಮ್ಮಿನಿಂದ ಬೀಗತೊಡಗಿತು.
ಕಣ್ಣೀರು….
ಆ ಮಗುವನ್ನು ಒಂದೇಸಮನೇ
ಬಡಿಯುತಿದ್ದ ಆಕೆ ತುಂಬಾ ಅಳುತಿದ್ದ ,ಕಣ್ಣೀರು ಸುರಿಸುತ್ತಿದ್ದ ಮಗನನ್ನು ಕಂಡು ಒಮ್ಮೇಲೇ
ಬಾಚಿ ತಬ್ಬಿ ಅವಳೂ ಅಳತೊಡಗಿದಳು!
ಕುಡಿದು ಬಂದು ಹೆಂಡತಿಯನ್ನು ಹೊಡೆದು,ನನ್ನ ಸಂತಾನವೆಲ್ಲ ಹೀಗೆ ಇರತ್ತದೆಯೆಂದು ಭಯ ತರಿಸಿ ಮೂಲೆಯಲಿ ಮಲಗಿದ ಅಪ್ಪನಿಗೆ ಇದರ ಪರಿವೆಯೇ ಇದ್ದಂತಿರಲಿಲ್ಲ.
ಭಿಕ್ಷುಕಿ….
ಸುಡುಬಿಸಿಲಿನಲಿ ಆ ಸಿಗ್ನಲ್ಲಿನಲ್ಲಿ ಪುಟ್ಟ ಮಗುವೊಂದನು ಸೊಂಟದಲಿ ಎತ್ತಿಕೊಂಡು ಯಾತನೆಯಿಂದ ಯಾಚಿಸುತ್ತಿದ್ದ ಭಿಕ್ಷುಕಿಯ ಕಂಡು ಮರುಕಪಟ್ಟು ನೂರು ರೂಪಾಯಿಯ ನೋಟೊಂದನ್ನು ಕೈಗಿಟ್ಟು ಹೊರಟ ಕಾರಿನಲ್ಲಿದ್ದ ಆ ಮಹಿಳೆಗೆ “ಅಮ್ಮಾ ನೂರು ಕಾಲ ಚನ್ನಾಗಿರಲಿ” ಎಂದು ಆಕೆ ಹರಿಸಿದಳು. ಆಗ ತಾನೇ ಮುಗಿದ ಸಮಾರಂಭದಲಿ ಆಕೆಗೆ ಯಾರೋ ಬಂಜೆ ಎಂದು ಕರೆದಿದ್ದು ಕಿವಿಗೆ ಬಿದ್ದಿತ್ತು. ಮನಸ್ಸು ನೊಂದಿತ್ತು.
featured image: 123clicks.com
- ಕಳೆದುಕೊಂಡಿದ್ದು ಇಲ್ಲೇ… - June 4, 2020
- ಪುಟ್ಟ ಕತೆಗಳು… - June 3, 2020
- ಮರೆಯಾದ ಮಾಣಿಕ್ಯ…. - June 2, 2020