ಬ್ಯಾರನ್ ಅಂತೋಣಿಯವರು ಸೆರೆಹಿಡಿದ ಕಿಂಗ್ ಫಿಷರ್ ಚಿತ್ರ. ಪ್ರಕೃತಿ ಪ್ರಿಯರಾದ ಅಂತೋಣಿಯವರು ತಮ್ಮ ದಿನದ ೬-೮ ಗಂಟೆಗಳನ್ನು ಪ್ರಕೃತಿಯ ಮಡಿಲಿನಲ್ಲಿ ಕಳೆಯುತ್ತಾರೆ. ಪ್ರಕೃತಿಯಲ್ಲಿ ಹೊಸ ಹೊಸ ನೋಟಗಳನ್ನು ಸೆರೆಹಿಡಿದು ಆ ಕ್ಷಣಗಳನ್ನು ಅಜರಾಮರವಾಗಿಸುವುದೇ ಅವರ ಗುರಿ. ಜೀವನ ಇರುವುದು ನಾಲ್ಕು ಗೋಡೆಗಳ ಮಧ್ಯೆ ಅಲ್ಲ. ಕ್ಯಾಮೆರಾ ತೆಗೆದುಕೊಂಡು ಬೆಳಿಗ್ಗೆ ೫ ಗಂಟೆಗೆ ಹೊರ ಹೊರಡು. ಪ್ರಾಣಿಗಳು ಬರುವ ಜಾಗಗಳನ್ನು ಸ್ಟಡಿ ಮಾಡಿ ಕುಳಿತು ಕಾಯಬೇಕು. ಕೆಲವೊಮ್ಮೆ ೩-೪ ಗಂಟೆಗಳು ಏನೂ ನೆಡೆಯುವುದಿಲ್ಲ. ಅದೊಂದು ಕ್ಷಣದಲ್ಲಿ ಪ್ರತ್ಯಕ್ಷವಾಗುತ್ತವೆ. ತಾಳ್ಮೆ, ಸಮಯ ಎರಡೂ ಮುಖ್ಯ ಎಂದು ಉಪದೇಶಿಸುತ್ತಾ, ಪ್ರೇರೇಪಿಸುತ್ತಾ, ತಮ್ಮ ದಿನನಿತ್ಯದ ಫೋಟೋಗ್ರಫಿ ಮುಂದುವರೆಸುತ್ತಾ ಇರುತ್ತಾರೆ. ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿರುವ ಜರ್ಮನಿ ದೇಶದ ಬ್ಯಾರನ್ ಮಲೆನಾಡಿನ ತೀರ್ಥಹಳ್ಳಿಗೂ ಭೇಟಿ ನೀಡಿದ್ದಾರೆ. ತಮ್ಮ ಭಾರತದ ಪ್ರವಾಸದ ಅನುಭವಗಳನ್ನು ಮೆಲುಕು ಹಾಕುತ್ತಾ, ತಮ್ಮ ರಿಟೈರ್ಮೆಂಟ್ ಜೀವನವನ್ನು ಪ್ರಕೃತಿಯಲ್ಲಿ ಕಳೆಯುತ್ತಿದ್ದಾರೆ.

ಮೂಲತಃ ತೀರ್ಥಹಳ್ಳಿಯವರು. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್. ಹವ್ಯಾಸೀ ನೇಚರ್ ಫೋಟೋಗ್ರಾಫರ್. ಪ್ರಕೃತಿ ಎಂದರೆ ಬಹಳ ಪ್ರೀತಿ. ಹೊಸ ಹವ್ಯಾಸಗಳನ್ನು ರೂಡಿಸಿಕೊಳ್ಳುವುದೇ ಇವರ ಒಂದು ಹವ್ಯಾಸ.
ಬರಹ: Explore Experience Evolve
Latest posts by ಅಶ್ವಿನಿ ಕೋಟೇಶ್ವರ
(see all) Like this:
Like Loading...