ವಿರಮಿಸುತ್ತೇನೆ ನಾನು
ಕನ್ನಡಿಯ ಬಿಂಬದೊಳಗೆ
ಮತ್ತೆ ಮತ್ತೆ
ಚಲಿಸುವುದಿಲ್ಲ
ಮನಸು ನಿಂತಲ್ಲೇ ನಿಂತಿದ್ದರೆ!
ಮೌನದಾಚೆಯ
ಮಾತು ಕಾಣುತ್ತಿರುತ್ತದೆ
ಚಲಿಸಿದಾಗಲೆಲ್ಲ
ಮಾತು ಶುರುವಾಗುತ್ತದೆ!
ಬಿಂಬವೊಂದು ಎದುರಾದರೆ ಸಾಕು
ಮಾತನಾಡಲು ತೊಡಗುತ್ತೇನೆ
ಹೀಗೆ ಆಗಾಗ ಕನ್ನಡಿಯನ್ನು
ನಿಜವೆಂದೇ ನಂಬುತ್ತೇನೆ
ಕನ್ನಡಿ ತೋರುವುದು
ಬಿಂಬವನ್ನೇ ಅಲ್ಲ
ನನ್ನನ್ನೇ ಅಂದುಕೊಂಡು
ಜಂಭಪಡುತ್ತೇನೆ
ಮಂಜು
Latest posts by ಮಂಜುನಾಥ್ ಬೆಜ್ಜವಳ್ಳಿ (see all)
- ಕಳೆದುಕೊಂಡಿದ್ದು ಇಲ್ಲೇ… - June 4, 2020
- ಪುಟ್ಟ ಕತೆಗಳು… - June 3, 2020
- ಮರೆಯಾದ ಮಾಣಿಕ್ಯ…. - June 2, 2020