Write to us : Contact.kshana@gmail.com

ಕುರುಬನ ಆರ್ಥಿಕ ವಿಚಾರಧಾರೆ

0
(0)

ಮೊನ್ನೆ ನಾನು ಹುಲಿದುರ್ಗಾದಿಂದ ಮದ್ದೂರು ಕಡೆಗೆ ಹೋಗುವ ದಾರಿಯಲ್ಲಿ ಈ ಫೋಟೋ ತಗೆದದ್ದು. 300 ಕುರಿ – ಇಬ್ಬರು ಕುರುಬರು .. ಯಾಕೆ ಈ ವಿಚಾರವನ್ನು ನಿಮ್ಮ ಮುಂದೆ ಪ್ರಸ್ಥವನೆ ಮಾಡ್ತಿದೀನಿ ಅಂಥ ಹೇಳ್ತೀನಿ ನೋಡಿ ಮುಂದೆ…

ನಾನು ಆ ಕುರುಬನ ಜೊತೆ ಒಂದಿಷ್ಟು ಕಾಲ ಕಳ್ದೆ.. ಅವರ ಕಾಯಕ ಹಾಗು ಪ್ರತಿಫಲದ ಸ್ವರೂಪ ಎಂಥವರಿಗೂ ಮೈ ಜುಮ್ಮ್ ಎನ್ನಿಸುತ್ತದೆ. ಅವರ ಸಹಜ ಮಾತು, ಸಹಜ ಬದುಕು ಹಾಗು ಅವರ ಕಾರ್ಯವೈಪರಿ ಎಂಥವರಿಗೂ ಖುಷಿ ಕೊಡುತ್ತದೆ..

ನಾವಿಬ್ಬರೂ ಒಂದಷ್ಟು ಕಾಲ ಚರ್ಚೆ ಮಾಡಿದ್ವಿ.. ಒಂದ್ ಟೀ ಜೊತೆ (lockdown ಅಂಥ ನಾವೇ ಊಟ, ಟೀ ಕಟ್ಕೊಂಡ್ ಹೋಗಿದ್ದೋ)…. ಕುಡಿತ ಕುಡಿತ ಹಿಂಗಿತ್ತು ನೋಡಿ ನಮ್ ಚರ್ಚೆ :

1. ಸ್ವಾಮಿ ಇಷ್ಟೊಂದು ಕುರಿ ಇದ್ಯಲ್ಲ (300ಕ್ಕೂ ಮೇಲು) ಇದನೆಲ್ಲ ಎಷ್ಟ್ ಜನ ಸೇರಿ ನೋಡ್ಕೊತೀರ.? ಅಂದೆ

ಅವರ ಉತ್ತರ: ಇಬ್ರು ಸೇರಿ ಸರ್. ಇಬ್ರು ಸಮನಾಗಿ ನೋಡ್ಕೋತೀವಿ, ಬಂದದ್ದನ್ನ ಸಮನಾಗಿ ಪಾಲ್ ಮಾಡೋಥಿವಿ.

2. ಒಂದು ಕುರಿ ಮಾರಿದ್ರೆ ಎಷ್ಟು ಹಣ ಸಿಗುತ್ತೆ.?

ನೀವೇ ಲೆಕ್ಕ ಹಾಕಿ ಸರ್, ಒಂದ್ ಕೆಜಿಗೆ 280 ರಿಂದ 300 ರೂಪಾಯಿ.. ಒಂದ್ ಕುರಿ ಸರಿ ಸುಮಾರು 18, 20, 22 ಕೆಜಿ… ಹಿಂಗೆ… ನಾನು average 20*300: 6000 ( ಒಂದು ಅಂದಾಜಿನ ಲೆಕ್ಕ ಅಷ್ಟೇ, ಚರ್ಚೆ ಮಾಡಣ) ಅಂಥ ಲೆಕ್ಕ ಹಾಕ್ದೆ..

3. ಹಂಗಿದ್ರೆ 300 ಕುರಿಗೆ 6000 ನಂತೆ ನೋಡಿದ್ರೆ, 18 ಲಕ್ಷ ನಿಮಿಬ್ರತ್ತ ಇದೆ ಅಂದಾಯಿತು ಅಲ್ವಾ?? ಅಂದೆ..

ಅದು ತಪ್ಪು ಲೆಕ್ಕ ಸರ್ ಅಂದ.. ನಾನು, ಯಾಕಪ್ಪ ಏನ್ ತಪ್ಪಿದೆ ಇದ್ರಲ್ಲಿ ಅಂದೆ…

ನಂಗೆ ಯಾವ್ ಮೇಸ್ಟ್ರು ಹೇಳಿಕೊಡದ ಕೊನೆಯಲ್ಲಿ ಈ ಕುರುಬ ಹೇಳಿಕೊಟ್ಟ..

“ನೋಡಿ ಸರ್ ಹಾಗೆಲ್ಲ ಲೆಕ್ಕ ನಾವ್ ಹಾಕಲ್ಲ, ನಮ್ ಲೆಕ್ಕನೆ ಬೇರೆ. ಕುರಿಗಳು ಮರಿ ಹಾಕ್ತವೆ, ಪ್ರತಿ ವರ್ಷ ಒಂದಂತೂ ಗ್ಯಾರಂಟಿ. ಈಗ 300 ಕುರಿ ಮುಂದಿನ ವರ್ಷ 500 ಆಗ್ತಾವೆ, ಅದರ ಮುಂದಿನ ವರ್ಷ 800 ಹಿಂಗೇ.. (ಕೆಲವು ಸಾಯುತ್ತದೆ, ಕೆಲವನ್ನು ಹಂಗೆ ಮಾರ್ತಿರ್ತಿವಿ.. ನಮ್ಗೂ ಖರ್ಚ್ ಇರುತ್ತೆ ನೋಡಿ..)

ಜೀವನದ ಲೆಕ್ಕ ಹಿಂಗೇ.. ಇಲ್ಲಿ ನಾವು ಮರಿ ಹಾಕ್ತಿವಿ : ಅವು ಮರಿ ಹಾಕ್ತವೆ.. ನಮ್ ಮರಿಗಳು ಅವಗುಳ್ ಮರಿಗಳ್ ಜೊತೆ ಬದುಖ್ತವೆ. ಇದು ನಾವ್ ನೋಡೋ ಲೆಕ್ಕ.. ನೀವ್ ಹೇಳಿದಹಾಗೆ ಪುಸ್ತುಕ್ದಲ್ಲಿ 18 ಲಕ್ಷ 20 ಲಕ್ಷ ಅಂಥ ಬರ್ಕೊಬಹುದು, ಆದ್ರೆ ಹಂಗ್ ಜೀವನ ಮಾಡಕ್ ಆಗಲ್ಲ.. ನಾವ್ ನೋಡೋ ಲೆಕ್ಕ, ಬದುಕೋ ಲೆಕ್ಕ ಬೇರೇನೇ”

ಪ್ರತಿ ವರ್ಷ ಕುರಿ ದ್ವಿಗುಣ ಆಗ್ತಾವೆ ನಿಜ, ಆದ್ರೆ ನಮ್ ಕೈಲಿ ಸಾಕಾಕ್ ಆಗಲ್ಲ ನೋಡಿ, ಹಾಗಾಗಿ 250-300 ಮಡ್ಕೊಂಡು ಮಿಕ್ಕಿದ್ನಾ ಮಾರ್ತಿವಿ. ಹಿಂಸೆ ಇಂದ ಜೀವ್ನ ಮಾಡಕ್ ಆಗಲ್ಲ ನೋಡಿ”..

ಸ್ವಲ್ಪ ಸಮಯ ಬೇಕಾಯಿತು ನಂಗೆ ಈ ಲೆಕ್ಕ ಜೀರ್ಗುಸ್ಕೊಳೋಕೆ…

ಒಂದು ನಿಮಿಷ ಮನಸ್ಸು ಮೌನಕ್ಕೆ ಶರಣಾಯಿತು… ನಂತರ ನನ್ ಮಾತ್ ಮತ್ತೆ ಶುರು ಮಾಡ್ದೆ.

4. ಹೌದು ಎಲ್ಲಿಗ್ ಹೊಯ್ತಿದ್ಯ ಕುರಿಗಳ್ನ ಹಟ್ಕೊಂಡು?

ಹಸನ್ನಾದ್ ಕಡೆಗೆ ಹೋಗಿದ್ದೆ, ಇಷ್ಟು ದಿನ ಆಕಡೆ ಹಸರಿತ್ತು ಹಾಂಗಾಗಿ ಹೋಗಿದ್ವಿ, ಈಗ ನಮ್ ಊರಿಗೆ (ಅನಂಥಪುರಕ್ಕೆ) ಹೋಗ್ತಿದೀವಿ, ಅಲ್ಲೂ ಮಳೆಯಾಗಿ ಹಸಿರು ಸಿಗ್ತಾವೆ ಮಳೆಗಾಲದಲ್ಲಿ ಅಂದ.

5. ನೈಟ್ ಹೆಂಗೆ ನಿಮ್ ಕಥೆ ಅಂದೆ.

ಈಗ್ ಈಗ ಡಿಮ್ಯಾಂಡ್ ಜಾಸ್ತಿ ಆಗ್ತಿದೆ ಸರ್, ಎಲ್ರು ತೋಟದ ಮಂದೆಗೆ ನಮ್ನ ಮುಂಚೆನೇ ಬುಕ್ ಮಾಡ್ಕೋತಾರೆ. ತೆಂಗಿನ ತೋಟನೆ ಹೆಚ್ಚು, ಅಡಿಕೆಯವರು ಅವಾಗ್ ಅವಾಗ.. ನಮ್ಗೆ ಊಟ ಅವ್ರೆ ಕೊಡ್ತಾರೆ, ನಾವು 4 ಕತ್ತೆನ ಸಕೀರ್ತಿವಿ.. ಆಗೂ ಮುಂದೆ ಹೋಗ್ತಿದೆ ನೋಡಿ… ಅವು ನಮ್ ಬಟ್ಟೆ ಬರೆಗಳನ್ನ ಹೊತ್ಕೊಂಡ್ ಬರ್ತವೆ, ಸಣ್ಣ ಟೆಂಟು ಇರತ್ತೆ ನಮ್ ಹತ್ರ. ಮಳೆ ಬಂದ್ರೆ ಹಾಕೊತಿವಿ, ಇಲ್ಲ ಅಂದ್ರೆ ಹಂಗೆ ದಿಂಬು-ಕಂಬ್ಳಿ ಹೊತ್ಕೋಡ್ ಮಲ್ಕೊತಿವಿ. 4-5 ದಿನ ಮುಂದೆ ಇಟ್ಕೋತಾರೆ, ಸ್ವಲ್ಪ ಹಣನೂ ಕೊಡತಾರೆ ಹೋಗೋವಾಗ..

6. ನಿಮ್ಗೆ ಚಳಿ ಆಗಲ್ವಾ night ಹೋತಲ್ಲಿ.

ಇಲ್ಲ ಸರ್. ಬೆಚ್ಚಗೆ ಇರುತ್ತೆ. ಕುರಿ ಮುಂದೆಜೊತೆ ಇದ್ರೆ ಚಳಿ ಆಗಲ್ಲ..

7. ಕುರಿ ಹಾಟ್ಕೊಂಡು ಹೋಗೋವಾಗ ಮರಿ ಏನಾದ್ರು ಹಾಕ್ತದ. ಅಂಥ ಅನುಭವ ಏನಾದ್ರು ಆಗಿದ್ಯಾ.?

ಅನುಭವ ಏನ್ ಬಂತು ಸರ್.. ಇದ್ದೆ ಇರುತ್ತೆ ಯಾವಾಗ್ಲೂ.. ಸೊಪ್ಪಿನಿಂದ ವಾರ್ಸಿ, ಚನ್ನಾಗಿ ಆದ್ರೂ ತಾಯಿ ಹಾಲು ಕುಡ್ಸಿ ಹಂಗೆ ಮುಂದೆ ಜೊತೆ ಸೇರ್ಕೊಂಡ್ ಹೋಗ್ತೀರ್ಥವೆ.

8. ನಿಮ್ಗೆ ಈ ಕಾಯಕ ಏನನ್ಸುತ್ತೆ. ಖುಷಿನಾ…

ಇದನ್ನ ಬಿಟ್ರೆ ನಂಗೇನು ಗೊತ್ತಿಲ್ಲ.. ನಮ್ ಅಪ್ಪ, ಅವ್ರ್ ಅಜ್ಜನ ಕಾಲದಿಂದಲೂ ಇದೆ ನಮ್ ಕಸಬು.. ನಾವ್ ಚನಗಿದಿವಿ, ಏನ್ ಸಮಸ್ಯೆ ಇಲ್ಲ.

9. ಏನ್ ಮಾಡ್ತಿರಾ ಬಂದ ಹಣದಲ್ಲಿ?

ಊರಲ್ಲಿ ಜಮೀನ್ ಇದೆ. ನಮ್ದೇ 10 ಎಕರೆ ತೆಂಗಿನ ತೋಟ ಇದೆ, 2ಎಕರೆ ಗದ್ದೆ ಇದೆ, 4 pumpset ಇದೆ.. ನನ್ ಹೆಂಡ್ತಿ ಮಾವ, ಅತ್ತೆ, ಮಗ ನೋಡ್ಕೋತರೆ.. ನಾನು 5 ತಿಂಗ್ಳು ಅವ್ರ್ ಜೊತೆ ಇರ್ತಿನಿ.. ಹಸಿರು ಕಾಲಿ ಆಗ್ತಾದೆ ಅಷ್ಟ್ರಲ್ಲಿ..
ನಂತರ ಮನೆ ಬಿಟ್ಟು ಬರ್ತಿವಿ..

10. ಅಷ್ಟೆಲ್ಲ ಇಟ್ಕೊಂಡು ಯಾಕ್ ಹಿಂಗ್ ಊರ್ ಊರು ಸುತ್ತಿರ.. ಸುಮ್ನೆ ಅಲ್ಲೇ ಗದ್ದೆ ಕೇಸ್ಲಾ ಮಾಡ್ಕೊಂಡ್, ಹೆಂಡ್ತಿ-ಮಕ್ಳು ಜೊತೆ ಇರ್ಬಹುದು ಅಲ್ವಾ?

ನೋಡಿ ಸರ್, ನಾವ್ ಒಂದ್ರು ಮೇಲೆ ನಂಬ್ಕೊಂಡ್ ಬದ್ಕಲ್ಲ. 3, 4 ಕಡೆ ಇಂದ ಆದಾಯ ಬಂದ್ರೆ ಜೀವನ ಸುಲಭ. ಸಮ್ನೆ ಕುತ್ಕೊಂಡು ಏನ್ ಮಾಡ್ಬೇಕ್ ಹೇಳಿ.. ಒಂದಲ್ಲ ಒಂದು ನಮ್ನ ಕೈ ಹಿಡಿತವೇ.. ಕೈಲಿ ಆಗೋವರ್ಗು ದುಡ್ಯಾನ, ಆಮೇಲ್ ಶಿವ ಅನ್ನನಾ ಅಂಥ ಹೇಳಿ ಮುಂದೆ ಹಚ್ಚ, ಹಚ್ಚ್, ಹಚ್ಚ್ ಅಂತ ರೋಡ್ ದಾಟುಸ್ಕೊಂಡ್ ಹಳ್ಳದ ಕಡೆಗೆ ಹೊರಟೋದ..

ನಂಗ್ ಆಮೇಲ್ ಅನ್ಸಿದ್ದು ಹಿಂಗೇ,

ನಮ್ಮ ದೇಶದ ಪ್ರಗತಿ ಯಾಕೆ ಯಾವಾಗ್ಲೂ industry, factory, ಕಟ್ಟಡ, ಬುಲೆಟ್ ಟ್ರೈನ್, ಕಾರು ಇಂಥವುಗಳಿಂದನೇ ನೋಡ್ತಿವಿ ಅಂಥ. ಇದು ಏನನ್ನು ಕೊಡಬಲ್ಲವು ಸ್ವಲ್ಪ ನೋಡಿ : ಹೋಗೆ, ಧೂಳು, ರೋಗ, ಪ್ರಕೃತಿ ನಾಶ, ಐಶಾರಾಮಿ ಕೊಳಕು ಜೀವನ.. ಇಂಥವೇ ಹೊರೆತು ಅನ್ನ, ನೀರು, ಗಾಳಿ, ಸ್ವಾಚ್ಚ ಬದುಕನ್ನಲ್ಲ.

ಕುರಿ ಕಾಯುವುದು, ಮೇಕೆ ಸಾಕುವುದು, ದನ ಕಾಯುವುದು ಇಂತವುಗಳನ್ನು MSME ಗೇ ಸೇರ್ಪಡನೆ ಮಾಡ್ಬೇಕು. ಜನ ತಮ್ಮ ಜೀವನವನ್ನು ತಾವೇ ಕಟ್ಟಿಕೊಳ್ಳಲು ಪ್ರೋತ್ಸಾಹಿಸಬೇಕು.

ಹಿಂಗ್ ಮಾಡಿದ್ರೆ ಸರ್ಕಾರಕ್ಕೂ, ದೇಶಕ್ಕೂ, ಪ್ರಕೃತಿಗೂ ಭಾರ ಕಡಿಮೆ..

ನಾವುಗಳು ಸುಲಭವಾಗಿ ಸಹಜ ಬದುಕಿನ ಸುಸ್ಥಿರ ಜೀವನವನ್ನು ಕಟ್ಟಿಕೊಳ್ಳಬಹುದು..

ಇದನ್ನೇ… J C Kumarappa ನವರು (Gandian economist) Economy of Permanence ಅಂದಿದ್ದು.. ನಾನು ಇದನ್ನು Freedom through constructive action ಅಂಥ ಕರೆಯಲು ಇಚ್ಚಿಸುತ್ತೇನೆ…

Dr. Manjunath(Naturalist)

Working to Bring Swaraj. Believes that village is our nation.

Works for reviving our faming system , culture, watershed, ponds, forest, pasture lands etc with Ethics and value.

 

 

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

Dr.ಮಂಜುನಾಥ್
Latest posts by Dr.ಮಂಜುನಾಥ್ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಈ ಕ್ಷಣವೆ ನಿಜದ ಬಾಳ್