ಅಮ್ಮನ ಬಳಿಯಲ್ಲಿ ಅಂಟಿ ಕೂರುವುದರಲ್ಲೆಷ್ಟು ಸುಖ. ಮರಿ ಹಾಕಿದ ಮೇಲೆ ಸಾಮಾನ್ಯವಾಗಿ ತಂದೆ ಕಾಣಿಸಿಕೊಳ್ಳುವುದಿಲ್ಲ. ಮರಿ ಬಾತುಕೋಳಿಗಳು ತಾಯಿಯನ್ನು ಹಿಂಬಾಲಿಸಿಕೊಂಡು ಓಡುವುದನ್ನು ನೋಡಲು ಅದೆಷ್ಟು ಚೆಂದ. ಮರಿಗಳು ತುಂಬಾ ಚಿಕ್ಕವು ಇದ್ದಾಗ, ತಾಯಿ ಯಾರನ್ನೂ ನಂಬುವುದಿಲ್ಲ. ಬಳಿ ಬರುವುದಿಲ್ಲ. ಸ್ವಲ್ಪ ಬಲಿತು, ತಮ್ಮ ರಕ್ಷಣೆಗಾಗಿ ತಕ್ಷಣ ಹಾರಲು ಶಕ್ಯರಾದ ಮೇಲೆ, ಮನುಷ್ಯರನ್ನೂ ನಂಬಿ ತಿನ್ನಲು ಏನಾದರೂ ಹಾಕುತ್ತಾರೇನೋ ಎಂದು ಹತ್ತಿರ ಬರುತ್ತವೆ. ಒಂದೆರಡು ಬಾರಿ ತಿನ್ನಲು ಕೊಟ್ಟರೆ ಸಾಕು, ಪುನಃ ಅವಿರುವ ಸ್ಥಳಕ್ಕೆ ಹೋದರೆ, ದೂರದಿಂದಲೇ ಗುರುತಿಸಿ ಹತ್ತಿರ ಬರುತ್ತವೆ. ಜೋಳ, ಓಟ್ಸ್ ಮುಂತಾದ ಕಾಳು ಪದಾರ್ಥಗಳನ್ನು ಅವುಗಳಿಗೆ ತಿನ್ನಲು ಕೊಡಬಹುದು. ಬ್ರೆಡ್ ಅಥವಾ ನಾವು ತಿನ್ನುವ ತಿಂಡಿಗಳು ಅವುಗಳ ಆರೋಗ್ಯವನ್ನು ಹಾಳುಮಾಡುತ್ತದೆ.
Latest posts by ಅಶ್ವಿನಿ ಕೋಟೇಶ್ವರ (see all)
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020