ಅದೇ ಜಾಗದಲ್ಲಿ
ಎದುರುಬದುರಾಗಿ ನಿಂತು
ಆಡಿದ ಕೊನೆಯ ಮಾತುಗಳಲ್ಲಿ
ಕಳಕಳಿಯೇನೂ ಇರಲಿಲ್ಲ
ಆದರೆ ಕಳೆದುಕೊಳ್ಳುವ
ಅನಿವಾರ್ಯತೆ ಇತ್ತು!
ಕೆಲವೊಮ್ಮೆ ಹೀಗೆಯೇ ಘಟಿಸಬೇಕೆಂದು
ಕಾಲವೇ ನಿರ್ಣಯಿಸಿರುತ್ತದೆ!
ಇನ್ನೂ ನಾವೇ ಹುಟ್ಟಿಸಿದ
ಪ್ರೇಮಭಾವವನು ಶಾಶ್ವತವೆಂದೇ
ನಂಬುವ ಮೂರ್ಖ ನಾನಲ್ಲ
ಜಗತ್ತಿನ ಚೆಂದದ ಬೆರಗುಗಳನೆಲ್ಲಾ
ಪುಟ್ಟ ಪುಟ್ಟ ಕಣ್ಣುಗಳಲ್ಲಿ
ಸೂರೆಮಾಡುವ ನಿನಗೆ
ನಾನು ಅಳಿಸಿಹೋಗುವ
ಚಿತ್ರವಾಗಿದ್ದು ವಿಶೇಷವೇನೂ ಅಲ್ಲ
ಮತ್ತೆ ಮತ್ತೆ ಹೇಳುತ್ತೇನೆ
ಒಮ್ಮೆಯಾದರೂ ನಾನು
ನಿನ್ನ ಕಪ್ಪು ಕಣ್ಣಿನ ಗೋಲದಲಿ
ಬಂಧಿಯಾಗಬೇಕಿತ್ತು
ಮೆಲುವಾಗಿ ಬಡಿಕೊಳ್ಳುವ ಆ ನಿನ್ನ
ಹೃದಯಕ್ಕೆ ಸಂಬಂಧಿಯಾಗಬೇಕಿತ್ತು
ಮಂಜು
Latest posts by ಮಂಜುನಾಥ್ ಬೆಜ್ಜವಳ್ಳಿ (see all)
- ಕಳೆದುಕೊಂಡಿದ್ದು ಇಲ್ಲೇ… - June 4, 2020
- ಪುಟ್ಟ ಕತೆಗಳು… - June 3, 2020
- ಮರೆಯಾದ ಮಾಣಿಕ್ಯ…. - June 2, 2020