ಇಟ್ಟಂತೆ ಇದ್ದುಬಿಡು
ಕೊಟ್ಟ ಸಾಲಕೆ ಬಡ್ಡಿ ಕಟ್ಟದಿರೆ ಬಿಡುವರೇಂ ?
ಕೊಟ್ಟೆಯೇನನು ನೀನು ದೈವದಾ ಋಣಕೆ ?
ಕೊಟ್ಟುದೇಂ ಬಿಟ್ಟುದೇಂ ಬಡ್ಡಿಗಾಯ್ತಸಲಿಗೇಂ?
ಇಟ್ಟಂತೆ ಇದ್ದುಬಿಡು ಜಾಣಮೂರ್ಖ//
ಯಾರ ಬಳಿಯಾದರೂ ಸಾಲ ಪಡೆದರೆ ಬಡ್ಡಿ ಕಟ್ಟದಿದ್ದರೆ ಬಿಡುವರೇನು ? ಹೇಗಾದರೂ ಮಾಡಿ ಕಟ್ಟಲೇಬೇಕು ತಾನೆ ? ಆದರೆ ಭಗವಂತನಿಂದ ಪಡೆದ ಸಾಲಕ್ಕೆ ಕಟ್ಟತ್ತಿದ್ದೇವಾ ಬಡ್ಡಿಯನ್ನು ನಾವು !? ಪಂಚಭೂತಗಳ ಋಣ ತೀರಿಸಲಾದೀತೆ !? ಚಿಂತಿಸಲೇಬೇಕಾದ ವಿಷಯ ! ಅನಂತವಾದ ದಿವ್ಯಸೃಷ್ಟಿಯು ನಮಗೆ ನೀಡಿರುವ ಕೊಡುಗೆಯನ್ನು ಬೇರಾರೂ ನೀಡಲು ಸಾಧ್ಯವೇ ಇಲ್ಲ. ಭಗವಂತನಂತೂ ಈ ಋಣಕ್ಕೆ ಪ್ರತಿಯಾಗಿ ಏನನ್ನೂ ಕೇಳುವುದಿಲ್ಲ. ಅದಕ್ಕೇ ಈ ರೀತಿಯ ಬದುಕೇನು ನಮ್ಮದು !? ಏನಾದರೂ ಕಿಂಚಿತ್ ಕೊಡುಗೆ ನಮ್ಮಿಂದ ನೀಡಲ್ಪಟ್ಟರೆ ಅದು ಬರೀ ಬಡ್ಡಿಗಾಯ್ತೆಂದೇ ಭಾವಿಸಬೇಕು. ಮತ್ತೆ ಅಸಲಿನ ಕತೆ ಹೇಗೆ !? ಏನಿಲ್ಲ, ತುಂಬಾ ಸರಳ. ಅವನಿಟ್ಟಂತೆ ಸಂಪೂರ್ಣ ಸಮರ್ಪಣಾ ಭಾವದಲ್ಲಿ ಬದುಕಿದರಾಯ್ತು ಅಷ್ಟೆ. ಅದೇ ಅಸಲು. ಹೀಗೆ ಬದುಕಿ ನೋಡಿ ಬದುಕು ಹೇಗಿರುತ್ತೆ ಅಂತ ! ಅದು ಬ್ರಹ್ಮಾನಂದವನ್ನೀಯುವ ಸುಂದರ ಬದುಕಾಗುತ್ತದೆ. ಇನ್ನೇನು ಬೇಕು ಇದಕ್ಕಿಂತ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021