ದೈವತ್ತ್ವ – ಗುರುತತ್ತ್ವ
ಕಲ್ಲಾದೊಡೇನಂತೆ ಗುಡಿಯೊಳಿಹ ದೇವ ತಾ
ನೆಲ್ಲರಾ ದಿಟ್ಟಿ ತಾ ದೈವತ್ವಕಲ್ತೆ ?
ಎಲ್ಲರಂತಿರೆ ನರನ ರೂಪಿಂದೆ ಗುರುರಾಯ
ಬಲ್ಲಿದನು ನಂಬಿನಡೆ ಜಾಣಮೂರ್ಖ //
ದೇವಾಲಯದಲ್ಲಿರುವ ದೇವನ ವಿಗ್ರಹವು ಕಲ್ಲಿನದೇ ಇರಬಹುದು. ಆದರೆ ದೇವಾಲಯಕ್ಕೆ ಹೋಗುವ ಎಲ್ಲರೂ ನೋಡುವುದು ಆ ವಿಗ್ರಹದಲ್ಲಿರುವ ದೈವತ್ವದ ಕಡೆಗೇ ಹೊರತು ಕಲ್ಲನ್ನಲ್ಲ. ಹಾಗೆಯೇ ಗುರುವು ನಮ್ಮ ನಿಮ್ಮಂತೆ ನರರೂಪಿಂದಲೇ ಇರಬಹುದು ಆದರೆ ನಾವು ನೋಡಬೇಕಿರುವುದು ಗುರುತತ್ತ್ವವನ್ನೇ ಹೊರತು ಗುರುವಿನ ನರಮಾನವ ರೂಪವನ್ನಲ್ಲ ! ಗುರುವಿನಲ್ಲಿ ಏನನ್ನು ನೋಡಬೇಕೆಂಬುದು ಅವರವರ ಸಂಸ್ಕಾರವನ್ನು ಅವಲಂಬಿಸಿರುತ್ತದೆ. ನೋಡುವ , ಗುರ್ತಿಸುವ, ಅವರಿಂದ ಸ್ವೀಕರಿಸುವ , ಗುರುವಿಗೆ ಸಮರ್ಪಿಸುವ ಪ್ರತಿಯೊಂದೂ ಅಂಶವೂ ಸಹ ಉದಾತ್ತವಾಗಿರಬೇಕು. ಭಕ್ತಿಪೂರ್ವಕವಾಗಿರಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021