ಹಾಸಿ ಹೊದಿವಷ್ಟಿಹುದೊ
ಮೋಸಗೈವನುಮಿಲ್ಲಿ ರಾಜರೋಷದಿ ಬಾಳ್ವ
ಘಾಸಿಗೊಳಿಪಗೆ ಮರ್ತ್ಯ ಪರಮಪದವಯ್ಯ !
ಲೇಸಿನಿಂದೀಸುವಂಗೀಸೀಸೆ ಘಾಸಿಗಳು
ಹಾಸಿ ಹೊದಿವಷ್ಟಿಹುದೊ ಜಾಣಮೂರ್ಖ//
ಈ ಪ್ರಪಂಚದಲ್ಲಿ ಮೋಸ ಮಾಡುವವನು ತಾನೇನೂ ಮಾಡೇ ಇಲ್ಲವೆಂಬಂತೆ ರಾಜಾರೋಷದಿಂದ ಬದುಕುತ್ತಿದ್ದಾನೆ. ಇನ್ನೊಬ್ಬರನ್ನು ಘಾಸಿಗೊಳಿಸಿ ಬದುಕುವವನು ಸುಖವಾಗಿ ಜೀವಿಸುತ್ತಿದ್ದಾನೆ. ಅವನಿಗೆ ಈ ಮರ್ತ್ಯವು ಸ್ವರ್ಗಸದೃಶವಾಗಿದೆ. ಸರಳವಾಗಿ ಬದುಕುವವನಿಗೆ ಬಹುವಾದ ಕಷ್ಟಗಳು ಬಾಧಿಸುತ್ತಿವೆ. ಇದನ್ನು ಕಂಡೇ ಇರಬಹುದು ದಾಸರು “ಸತ್ಯವಂತರಿಗೇ ಇದು ಕಾಲವಲ್ಲ ದುಷ್ಟ ಜನರಿಗೇ ಸುಭಿಕ್ಷ ಕಾಲ” ಎಂದಿದ್ದಾರೆ. ಸತ್ಯವಂತರ ಕಷ್ಟಗಳು ಹಾಸಿ ಹೊದಿವಷ್ಟು ! ಹೆಜ್ಜೆ ಹೆಜ್ಜೆಗೂ ಇಲ್ಲಿ ಪರೀಕ್ಷೆಗಳೇ ! ಆದರೆ ಒಂದಂತೂ ಸತ್ಯ. ಮಿಥ್ಯದ ಉಪಟಳ ಬಹುಕಾಲ ನಡೆಯದು. ತೀರಾ ಉದ್ದವಾದದ್ದು ಒಂದು ದಿನ ಬಗ್ಗಲೇಬೇಕಲ್ಲವೆ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021