ಗುರುಪಥ
ಸುರುಗಿಲ್ಲದೆಡೆಯಲ್ಲಿ ಉರಿಯು ರಾಚೀತೆಂತು?
ಉರುವಲಾಗದೆ ಬಾಳೆ ಉರಿಯ ಕಾವೆಂತು?
ಅರಿವ ನೀರಡಿಸೇಳು ಉರಿಯನಾರಿಸಿ ಬಾಳು
ಗುರುಪಥದಿ ಬದುಕೇಳು ಜಾಣಮೂರ್ಖ//
ಉರುವಲು ಇರುವ ಕಡೆಯಲ್ಲಿ ಬೆಂಕಿ ರಾಚುತ್ತದೆ. ಉರುವಲೇ ಇಲ್ಲದಿದ್ದರೆ ! ಬೆಂಕಿ ನಂದಿ ಹೋಗುತ್ತದೆ ತಾನೆ !? ಮನದ ಬೆಂಕಿಗೆ ನೀನು ಉರುವಲಾಗಬೇಡಯ್ಯಾ ಗೆಳೆಯ. ಉರಿಯಿಂದಾದ ಗಾಯ ಮಾದೀತು. ಮನದ ಉರಿ ಮಾಯದು. ನಾವು ಅದಕ್ಕೆ ಉರುವಲಾಗದೇ ಇದ್ದರೆ ನಮಗೆ ಉರಿಯ ಕಾವು ತಟ್ಟುವುದಾದರೂ ಎಂತು !? ಅದಕ್ಕೆ ಮನದ ಉರಿಗೆ ಅರಿವಿನ ನೀರ ಹಾಕಿ ಆರಿಸೇಳಪ್ಪ ಗೆಳೆಯ. ಗುರುಪಥವೇ ಶಿವಪಥವು , ಅರಿವಿನ ಪಥವು. ಆ ಜಾಡುಗುಂಟ ಸಾಗೇಳು. ಮೋಕ್ಷದ ದಾರಿ ತಾನಾಗೇ ಸಿಗುತ್ತದೆ. ಗುರುಪಥವು ಈ ಬಾಳ ಉರಿಯನ್ನು ಕ್ಷಣಮಾತ್ರದಲ್ಲಿ ಅರಿಸಬಲ್ಲ ಏಕೈಕ ಸಾಧನ. ಮರೆಯದಿರಯ್ಯ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021