ನೆಪಮೆಲ್ಲಮಿಲ್ಲಿ
ನಾ ಮನೆಯ ಕಟ್ಟಿದೆನು ನಾನುಜ್ಜುಗಂಬಡೆದೆ
ನಾ ಮಾಡಿದೀ ಕಜ್ಜಮಿದುಮೆನ್ನ ಆಸ್ತಿ
ನಾ ಮಾಡಿದೆಲ್ಲಮೆಂಬೀ ಬೆಮೆಯೊಳಾಡದಿರು
ನೀಮೊಂದು ನೆಪಮಿಲ್ಲಿ ಜಾಣಮೂರ್ಖ//
ನಾನು ಮನೆ ಕಟ್ಟಿದೆ ! ನನಗೊಂದು ಕೆಲಸ ಸಿಕ್ಕಿದೆ ! ಈ ಕೆಲಸ ನಾನು ಮಾಡಿದ್ದು ! ಇದು ನನ್ನ ಆಸ್ತಿ ಹೀಗೆಲ್ಲಾ ನಾನು , ನನ್ನದು ಎಂದೆಲ್ಲಾ ಬೀಗು ಈ ಮನೋಭಾವ ಇದೆಯಲ್ಲಾ ಇದೊಂದು ದೊಡ್ಡ ಭ್ರಮೆ. ಬದುಕಬೇಕಲ್ಲಾ ! ಅದಕ್ಕೆ ಎಲ್ಲರೂ ಏನಾದರೊಂದು ಉದ್ಯೋಗ ಮಾಡುತ್ತಲೇ ಇರುತ್ತಾರೆ ಅದರಲ್ಲರೆನೂ ವಿಶೇಷವಿಲ್ಲ ಬಿಡಿ. ಮತ್ತೆ ಮನೆ ವಿಷಯಕ್ಕೆ ಬಂದರೆ ಎಲ್ಲರಿಗೂ ಅವರವರದ್ದೇ ಆದ ಮನೆ ಇದ್ದೇ ಇರುತ್ತೆ. ರಕ್ಷಣೆಯ ಸಲುವಾಗಿ ಒಂದು ಗುಡಿಸಲಾದರೂ ಇದ್ದೇ ಇರುತ್ತದೆ. ಮತ್ತೆ ಆಸ್ತಿ ವಿಷಯಕ್ಕೆ ಬಂದರೆ ಯಾವುದೂ ಯಾರ ಆಸ್ತಿಯೂ ಅಲ್ಲ. ಒಂದು ದಿನ ಬಿಟ್ಟು ಹೋಗಲೇಬೇಕಲ್ಲವೆ !? ಇಲ್ಲಿರುವ ವರೆಗೂ ಮಾಡಿಕೊಂಡಿರುವ ಒಂದು ತಾತ್ಕಾಲಿಕ ವ್ಯವಸ್ಥೆ ಇದು ಅಷ್ಟೆ ಇದು. ಅಂತೆಯೇ ಇದೊಂದು ದೊಡ್ಡ ಭ್ರಮೆ ಕೂಡ! ಭ್ರಮೆಯೆಂದು ತಿಳಿದಿದ್ದರೂ ಸಹ ಮತ್ತೆ ಮತ್ತೆ ಅದೇ ಭ್ರಮೆಯಲ್ಲಿ ಬಿದ್ದು ಸಾಗುತ್ತಿರುವುದೊಂದು ದೊಡ್ಡ ವಿಪರ್ಯಾಸ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021