ಬಾಳ್ಸಂತೆಯ ಬೊಂತೆ
ಸಂತೆಗೆನ್ನುತ ಬರಲು ಸುಂಕ ಕಟ್ಟಲೆ ಬೇಕು
ಚಿಂತೆಮಾಡಲು ಬೇಕು ಬೊಂತೆ ಹೊರಬೇಕು
ಸಂತೆಗೇ ಬಾರದಿರೆ ಚಿಂತೆಬೊಂತೆಗಳೆಲ್ಲಿ?
ಅಂತೆ ಬಾಳ್ಸಂತೆ ಕೇಳ್ ಜಾಣಮೂರ್ಖ//
ಸಂತೆಗೆ ಬಂದ ಮೇಲೆ ಸುಂಕ ಕಟ್ಟಲೇ ಬೇಕು. ಚಿಂತೆಯಂತೂ ಇದ್ದೇ ಇರುತ್ತದೆ. ಸಂತೆಯ ಬೊಂತೆ ಹೊರಲೇಬೇಕು. ಅದೆಷ್ಟು ಕಷ್ಟ !? ಸಂತೆಗೇ ಬರದಿದ್ದರೆ ಸುಂಕವೂ ಇಲ್ಲ , ಬೊಂತೆಯ ಭಾರವೂ ಇಲ್ಲ ಹಾಗೆಯೇ ಚಿಂತೆಯೂ ಇಲ್ಲ ! ಹಾಗೆಯೇ ಈ ಬಾಳ ಸಂತೆ. ಜನ್ಮವೆತ್ತಿದರೆ ತಾನೆ ಜಂಜಾಟ ! ಜನ್ಮಕ್ಕೆ ಬರದಂತೆ ಎಚ್ಚರ ವಹಿಸಬೇಕೆಂದು ಸಾಧಕರ ಸಂದೇಶ. ಅದಕ್ಕೆ ನಾವು ಸಾಧಕರಾಗಬೇಕು. ಜನನ ಮರಣದ ಗುಟ್ಟನ್ನು ಅರಿಯಬೇಕು . ತನ್ಮೂಲಕ ಮುಕ್ತಿ ಮಾರ್ಗದ ಮೆಟ್ಟಿಲನ್ನು ಏರಬೇಕು. ಈಗ ಬಂದಿದ್ದಾಗಿದೆ. ಮುಂದೆ ಎಚ್ಚರವಹಿಸಬೇಕಾಗಿದೆ. ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021