ಗೊಜ್ಜು ರೊಟ್ಟಿ
ಒಬ್ಬನೊಳಗಿರದೆಲ್ಲ ಉಬ್ಬುಬ್ಬಿ ಹೋಗದಿರು
ಒಬ್ಬನೊಳು ರೊಟ್ಟಿ ಮೇಣೊಬ್ಬನಲಿ ಗೊಜ್ಜು!
ಬೊಬ್ಬಿರಿಯುತಿಹುದು ಜಗ ರೊಟ್ಟಿಗೊಜ್ಜಿಂಗಳ್ಕಿ
ಒಬ್ಬನೆಂದಿಗು ಒಬ್ಬ ಜಾಣಮೂರ್ಖ//
ಈ ಜಗತ್ತಿನಲ್ಲಿ ಎಲ್ಲವೂ ಒಬ್ಬನಲ್ಲೇ ಇರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದನ್ನು ಕೊಟ್ಟ ದೈವವು ಅವನ ವಸ್ತುವಿನ ಮೇಲೆ ಇವನಿಗೆ ಇವನ ವಸ್ತುವಿನ ಮೇಲೆ ತುಂಬಾ ಆಸೆಯನ್ನಿಟ್ಟಿರುತ್ತಾನೆ ! ಎಂತಹಾ ಸೋಜಿಗವಲ್ಲವೆ ? ಒಬ್ಬನ ಬಳಿ ರೊಟ್ಟಿಯಿದ್ದರೆ ಮತ್ತೊಬ್ಬನ ಬಳಿ ಗೊಜ್ಜು !ರೊಟ್ಟಿಗನಿಗೆ ಗೊಜ್ಜಿನ ಮೇಲೆ ಕಣ್ಣು ! ಗೊಜ್ಜಿಗನಿಗೆ ರೊಟ್ಟಿಯ ಮೇಲೆ ಕಣ್ಣು ! ಆದರೆ ಅವುಗಳನ್ನು ಹಿಡಿದುಕೊಂಡಿರುವವರು ಮಾತ್ರ ಎಂದೆಂದಿಗೂ ಒಬ್ಬರೇ ! ಎಲ್ಲರ ಸ್ಥಿತಿಯೂ ಇಷ್ಟೇನೇ ಆದರೂ ಮಾಯಾ ಪ್ರಪಂಚದ ಬೊಬ್ಬಿರಿಯುವಿಕೆಯಲ್ಲಿ ಒಬ್ಬನು ಇನ್ನೊಬ್ಬನಲ್ಲಿ ಅಡಗಿರುವ ಪ್ರೀತಿಯನ್ನು , ದೈವತ್ವವನ್ನು ನೋಡುತ್ತಲೇ ಇಲ್ಲ! ಬರೀ ಗೊಜ್ಜು ರೊಟ್ಟಿಯನ್ನಷ್ಟೇ ನೋಡುತ್ತಾ , ಅದಕ್ಕಾಗಿ ಹಪಹಪಿಸುತ್ತಾ ಬದುಕನ್ನು ದೂಡುತ್ತಿರುವುದು ಎಷ್ಟು ವಿಪರ್ಯಾಸವಲ್ಲವೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021