ಡಿಂಭ ಚೈತನ್ಯವರಿ
ಕುಂಭದೊಳಗಾಕಾಶ ತುಂಬಲಳವೇಂ ಪೇಳು
ಅಂಬುಧಿಗೆ ಶರ್ಕರವನೊಯ್ದು ಸಿಹಿಗಯ್ವರೇಂ
ಹುಂಬ ಮನದೊಡೆ ಸೇರಿ ಸುಖವನರಸೀಯೆಂತು
ಡಿಂಭ ಚೈತನ್ಯವರಿ ಜಾಣಮೂರ್ಖ//
ಪಂಚಭೂತಗಳಲ್ಲೊಂದಾದ ಆಕಾಶವನ್ನು ಅಳೆದು ಪಾತ್ರೆಯಲ್ಲಿ ತುಂಬಲು ಸಾಧ್ಯವೆ? ಸಾಗರಕ್ಕೆ ಸಕ್ಕರೆ ಸುರಿದು ಸಿಹಿನೀರನ್ನಾಗಿ ಪರಿವರ್ತಿಸಲು ಆಗುತ್ತದೆಯೇ ? ಅಂತೆಯೇ ಈ ಚಂಚಲವಾದ ಮೂರ್ಖ ಮನಸ್ಸಿನ ಅಣತಿಯಂತೆ ಕುಣಿದು ಸುಖವನ್ನು ಪಡೆಯಲಾದೀತೆ ? ನಮ್ಮಲ್ಲಿ ಹಣ ಕೊಟ್ಟರೆ ಸುಖದ ಸಾಧನಗಳು ಸಿಕ್ಕುತ್ತವೆಯೇ ಸುಖ ಸಿಗುತ್ತದೆಯೇ ? ಈ ಎಲ್ಲಾ ಅರಿವನ್ನು ಅನುಭವಿಸಿ ಘನನಾಗಬೇಕು. ದಿವ್ಯ ಚೈತನ್ಯದ ಶಕ್ತಿ , ಮಹತ್ತು , ಬೃಹತ್ತುಗಳನ್ನು ಅರಿಯಬೇಕು. ಶಬ್ದರಾಹಿತ್ಯರಾಗಿ ಮೌನಿಗಳಾಗಬೇಕು. ನಂತರದ ಸ್ಥಿತಿ ಮಹೋನ್ನತವಾದದ್ದೇ ಆಗಿರುತ್ತದೆ. ಅಲ್ಲವೇ ಗೆಳೆಯರೇ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021