ನಿನ್ನೊಳವ ಕಾಣ್ಮೊದಲು
ನಿನ್ನೊಳವ ಕಾಣ್ಮೊದಲು ಬಿಡದೆ ಶುಚಿಗೊಳಿಸದನು
ಅನ್ಯರಾ ಗೊಡವೆ ನಿನಗೇಕೆ ಹುಡುಕದಿರು !
ತನ್ನ ತಾನರಿತವನು ಎಣಿಸನನ್ಯರ ಕುಂದ
ನಿನ್ನು ಮೌನಮದೊಂದೆ ಜಾಣಮೂರ್ಖ//
ಇದೊಂದು ಸುಂದರ ಸತ್ಯ. ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂತಹ ಸತ್ಯಗಳು ಗೋಚರವಾಗುತ್ತವೆ. ಯಾವ ವ್ಯಕ್ತಿ ತಾನು ಗೈವ ತಪ್ಪುಗಳನ್ನು ಸ್ವತಃ ನೋಡಿ ಅಂತರಾವಲೋಕನ ಮಾಡಿಕೊಳ್ಳುವರೋ ಅವರು ಇನ್ನೊಬ್ಬರ ತಪ್ಪುಗಳನ್ನು ಎಣಿಸರು. ಅನ್ಯರ ಗೊಡವೆಗೇ ಅವರು ಹೋಗರು. ತಾನು ಏನೆಂದು ಅವರು ಅರಿತಿರುತ್ತಾರೆ. ಮತ್ತೆ ಮುಂದಿನ ಹಂತವಿನ್ನೇನು !? ಮೌನ ! ಶಬ್ದರಾಹಿತ್ಯವಾದ ಬದುಕು. ಬದುಕು ನಿರ್ಲಿಪ್ತ !!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021