ಜೀವಕೆಂತಹ ಸಾವು !
ಸಾವು ಕಾಯುವುದೇನು ಜೀವ ಬರಲೆನ್ನುತಲಿ?
ನಾವೆ ಸಾವಿಗೆ ಕಾಯ್ವ! ದೇವ ಬರಲೆಂದು
ಜಾವ ತೀರುವ ಮುನ್ನ ಜಾಗೃತಿಯ ಪಡೆವ ಬಾ
ಜೀವಕೆಂತಹ ಸಾವೊ ಜಾಣಮೂರ್ಖ//
ನಾವು ಸಾವನ್ನು ಕಾಯುತ್ತಿರಬೇಕೇ ಹೊರತು ಸಾವು ನಮ್ಮನ್ನು ಕಾಯುವಂತಾಗಬಾರದು ! ಅದು ಕಾಯುವುದೂ ಇಲ್ಲ ಬಿಡಿ. ಸಾವ ಕೊನೆಯ ಗಳಿಗೆಯಲ್ಲಿಯೂ ಅಯ್ಯೋ ತೋಟಕ್ಕೆ ಮಣ್ಣು ಹೇರಿಸಲಿಲ್ಲ! ನೀರು ಹಾಯಿಸಲಿಲ್ಲ ! ಹೊಸಮನೆಯ ಕಟ್ಟಲೇ ಇಲ್ಲ ! ಎಂಬಿತ್ಯಾದಿ ಚಿಂತೆಗಳಲ್ಲೇ ಇದ್ದರೆ ಇವನ ಈ ಕಾರ್ಯಗಳೆಲ್ಲಾ ಮುಗಿಯಲೆಂದು ಸಾವು ಕಾಯೋದಿಲ್ಲ. ಅದಕ್ಕೆ ಬಂದ ಕಾರ್ಯ , ಕರ್ತವ್ಯಗಳನ್ನು ಮೊದಲು ಮುಗಿಸಬೇಕು. ನಮ್ಮ ಸರದಿ ಬರುವ ಮುನ್ನ ಜಾಗೃತರಾಗಬೇಕು. ಸಾವು ದೇಹಕ್ಕೆ ಮಾತ್ರ. ಆತ್ಮಕ್ಕಲ್ಲ ಎಂಬ ತತ್ತ್ವವನ್ನು ಅರಿತು ನಾವೇ ನಮ್ಮ ಅವಶ್ಯ ಕರ್ತವ್ಯಗಳನ್ನು ಮುಗಿಸಿ ಸಾವಿಗಾಗಿ ಎದಿರು ನೋಡುವಂತಾಗಬೇಕೇ ಹೊರತು ಅಪೂರ್ಣತೆಯ ಬದುಕು ನಮ್ಮದಾಗಬಾರದು. ಈ ಎಚ್ಚರಿಕೆಯಿಂದ ಬದುಕಬೇಕು. ” ಶರಣರ ಸಾವನ್ನು ಮರಣದಲ್ಲಿ ನೋಡು ” ಎಂಬ ಮಾತು ಅದೆಷ್ಟು ಸತ್ಯ ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021