ಅವಶ್ಯಂ ಅನುಭೋಕ್ತವ್ಯಂ
ಕಷ್ಟಕುಂ ಇಷ್ಟಕುಂ ಎಷ್ಟೆರೆದರೇಂ ತೀರ
ದಿಷ್ಟು ಶಿಷ್ಟತ್ವ ಬರದೆಂತದಿದು ಮನಸು !
ಇಷ್ಟಕ್ಕೆ ಸೋತು ನೀ ಭ್ರಷ್ಠತನದೊಳು ಬದುಕೆ
ನಷ್ಟವೇನೈ ವಿಧಿಗೆ ಜಾಣಮೂರ್ಖ//
ಈ ಬದುಕಿನಲ್ಲಿ ಕಷ್ಟಗಳಿಗೆ ಕೊನೆಯಿಲ್ಲ ! ಹಾಗೆಯೇ ಮನದ ಇಷ್ಟಗಳಿಗೂ ಕೊನೆಯಿಲ್ಲ. ಎಷ್ಟೆಷ್ಟು ಕಷ್ಟಪಟ್ಟರೇನಂತೆ ಮನದ ಆಸೆಗಳಿಗಂತೂ ಕೊನೆಯೇ ಇಲ್ಲ. ಬಯಸಿದ್ದು ಸಿಕ್ಕ ಮೇಲೆ ಮತ್ತೊಂದರ ಬಯಕೆ ! ಅದು ಸಿಕ್ಕ ಮೇಲೆ ಇನ್ನೊಂದು ! ಇದರ ಈಡೇರಿಕೆಗಾಗಿ ಎಂತಹಾ ಭ್ರಷ್ಠಾಚಾರವೆಸಗಲೂ ಸಹ ಹಿಂಜರಿಯದು ಈ ಮನಸ್ಸು( ಈ ಮನುಷ್ಯ) ! ಇದರಿಂದ ವಿಧಿಗಾವ ನಷ್ಟವೂ ಇಲ್ಲ ! ಅವರವರ ಕರ್ಮ ಬುತ್ತಿ ಅವರದ್ದು. ಮನಸ್ಸಿನ ದಾಸರಾದರೆ ಆಗುವುದೇ ಹೀಗೆ. ಅದು ಮಾಡಬಾರದ್ದನ್ನು ಮಾಡಿಸುತ್ತೆ ! ಆಗ ಆಗಬಾರದ್ದು ಆಗುತ್ತೆ ಅಷ್ಟೆ ! ಸತ್ಕರ್ಮವೋ, ದುಷ್ಕರ್ಮವೋ , ಪಾಪವೋ , ಪುಣ್ಯವೋ ತೀರ್ಮಾನ ನಿಮ್ಮದೇ ಆಗಿರುತ್ತದೆ. ಅವಶ್ಯಂ ಅನುಭೋಕ್ತವ್ಯಂ ! ಅಲ್ಲವೇ ಸ್ನೇಹಿತರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021