ಸಂಕಲ್ಪ
ನೇಗಿಲನು ಪಿಡಿದು ಬೇಸಾಯ ಗೈವುದುಮೆಂದು
ಸೋಗು ಹಾಕಿದೊಡಾಯ್ತೆ ಸಾಗೀತೆ ಬದುಕು
ಸಾಗುವುದೆ ಸಂಕಲ್ಪಗಳ ಸಾರೆ ಬಾಹ್ಯದೊಳು
ಮೇಗಾಯ್ತೆ ಸೋಗಿನಿಂ ಜಾಣಮೂರ್ಖ//
ನಾನು ಬೇಸಾಯ ಮಾಡುತ್ತೇನೆ, ಬೆಳೆ ತೆಗೆಯುತ್ತೇನೆಂಬ ಕೇವಲ ಸಂಕಲ್ಪ ಮಾತ್ರದಿಂದ ಏನೂ ಕಾರ್ಯಸಾಧನೆಯಾಗದು. ಅದು ಮನಸ್ಸಿನಲ್ಲಿ ಮೂಡಬೇಕು. ಬರೀ ಸೋಗು ಹಾಕಿದರಾಯ್ತೆ ? ಇವತ್ತು ಬಹಳಷ್ಟು ಕಾರ್ಯಗಳು ಹೀಗೇನೆ ! ಅಚ್ಚರಿಯಾಗುತ್ತಿದೆಯೇ !? ಅದರೆ ಇದೇ ಸತ್ಯವು. ಕಾರ್ಯಕ್ಷೇತ್ರ ಯಾವುದೇ ಇರಲಿ. ಮೊದಲು ಸಂಕಲ್ಪಿಸಿ ಅಖಾಡಕ್ಕಿಳಿಯಬೇಕು. ತನಗೆ ಗೆಲುವು ಕಟ್ಟಿಟ್ಟ ಬುತ್ತಿಯೆಂಬ ನಂಬಿಕೆಯಿಂದ ದುಡಿಯಬೇಕು. ಪ್ರಯತ್ನ ಪಟ್ಟರೆ ಯಾವುದೂ ಅಸಾಧ್ಯವಲ್ಲ. ಆದರೆ ಕೇವಲ ಸಂಕಲ್ಪ ಮಾತ್ರದಿಂದ ಕಾರ್ಯಸಾಧನೆ ಖಂಡಿತ ಸಾಧ್ಯವಿಲ್ಲ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021