ಕಟ್ಟಿಕೊಂಡುದೆ ಬುತ್ತಿ
ಉಟ್ಟ ಬಟ್ಟೆಯ ಕಿಸೆಯೊಳಿರ್ದುದನು ಬಿಡುವರೇ
ನಿಟ್ಟುದೇನಿದೆಯೊ ಮಣ್ಣಾದಿಯನು ಬಿಡದೆ
ಬಿಟ್ಟು ಪೋಗೆವು ಏನ ಒಯ್ವುದದು ದಿಟಕೇಳು
ಕಟ್ಟಿಕೊಂಡುದೆ ಬುತ್ತಿ ಜಾಣಮೂರ್ಖ//
ಸ್ನೇಹಿತರೇ ನಾವು ಬಟ್ಟೆ ಒಗೆಯುವಾಗ ಕೊಳೆಯಾದ ಉಟ್ಟಬಟ್ಟೆಯ ಕಿಸೆಯಲ್ಲಿರುವುದನ್ನು ತೆಗೆದಿಟ್ಟುಕೊಳ್ಳುತ್ತೇವೆ ತಾನೆ? ಮಣ್ಣಿನ ಕಣವೂ ಇರದ ಹಾಗೆ ಕೊಡವಿ ತೆಗೆಯುತ್ತೇವೆ. ಹಾಗೆಯೇ ನಾವು ಕಟ್ಟಿಕೊಂಡ ಪಾಪ ಪುಣ್ಯಗಳು. ಒಂದು ಚೂರೂ ಬಿಡದಂತೆ ಒಯ್ಯುವುದು ಸತ್ಯ. ಅದೇ ನಮ್ಮ ಬುತ್ತಿ. ಸಂಚಿತ ಕರ್ಮಗಳು ಬೆಂಬಿಡದೆ ನಮ್ಮೊಡನೆ ಬರುತ್ತವೆ. ಅದಕ್ಕೇ ಸತ್ಕಾರ್ಯ , ಸತ್ಕರ್ಮಗಳನ್ನೆಸಗಿ ದೈವತ್ವವನ್ನು ಉಪಾರ್ಜಿಸಿಕೊಳ್ಳಬೇಕಾದ ಅಗತ್ಯವಿದೆ. ಅಲ್ಲವೇ ಗೆಳೆಯರೇ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021