ಭಯ-ಅಭಯ
ಇರುವೆಯಿಂದಿಂದ್ರಾದಿ ದೇವಂಗು ಭಯವಂತೆ
ಮರಣಭಯ ಮಾಯೆಭಯ ಕರ್ಮಭಯಮಿಹುದು
ಶರಣೆಂಬ ಭಾವದೊಳು ನಾನೆಂಬ ಗರ್ವಭಯ
ಗುರುದಾಸಗಿರದೊ ಭಯ ಜಾಣಮೂರ್ಖ//
ಸ್ನೇಹಿತರೇ , ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ಇರುವೆಯಿಂದ ಇಂದ್ರಾದಿ ದೇವತೆಗಳಿಗೂ ಭಯ ತಪ್ಪಿದ್ದಲ್ಲ. ಅವರಿಗೂ ಮರಣದ ಭಯವಿದೆ ! ಮಾಯೆಯ ಭಯವಿದೆ! ಕರ್ಮದ ಭಯವಿದೆ ! ತಾನೆಸಗುವ ಕರ್ಮಾಚರಣೆಯಲ್ಲಿ ಲೋಪವಾಗುವ , ಆಗಿರುವ ಭಯ ! ಶರಣೆಂಬ ಭಾವದಲ್ಲೂ ನಾನೆಂಬ ಗರ್ವದ ಉಪಟಳದ ಭಯವಿದೆ. ಎಷ್ಟೋ ಜನ ಮಹಾನ್ ದೈವ ಭಕ್ತರಿಗೂ ಈ ಗರ್ವವು ಆವರಿಸಿದ್ದುಂಟು ! ಇದರಿಂದ ಅವರು ನಾನಾ ಅವಸ್ಥೆಗಳನ್ನು ಪಟ್ಟುದುಂಟು ! ಹೌದು ತಾನೆ !? ಆದರೆ ಗುರುವಿನ ಚರಣದಾಸನಿಗೆ ಯಾವ ಭಯವೂ ಇರದು. ಎಲ್ಲವನ್ನೂ ಗುರುವೇ ನೋಡಿಕೊಳ್ಳುತ್ತಾನೆ . ಅದರೆ ಸಮರ್ಪಣಾ ಭಾವವಿರಬೇಕು. ಕುಟಿಲ ತಂತ್ರಗಳಿರಬಾರದು ! ಅಷ್ಟೆ. ಸತ್ಯದೆದಿರು ಮುಖವಾಡ ಬಾಲಿಶವಲ್ಲವೆ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021