ಕಳ್ಗುಡಿದ ಪಾಂಗಿನೊಲು
ಕಳ್ಳರಿಹರೆಂಟು ಜನ ಕೊಳ್ಳೆ ಹೊಡೆವರೊ ನಿನ್ನ
ಸುಳ್ಳರಾರೈವರಿವರೀಸೀಳೊ ಕೆಳೆಯ
ಮಳ್ಳನಂದದಿಯವರೊಳಾಡಿ ಪೋಗದೆ ನಿಲ್ಲು
ಕಳ್ಗುಡಿದ ಪಾಂಗಿನೊಲು ಜಾಣಮೂರ್ಖ//
ನಮ್ಮೊಳಗಿದ್ದಾರೆ ಎಂಟು ಜನ ಕಳ್ಳರು ! ಸುಳ್ಳರು ಆರು ಜನರಿದ್ದಾರೆ ! ಇವರ ಜೊತೆ ಮತ್ತೆ ಐವರು ಸೇರಿದ್ದಾರೆ ಇವರನ್ನೆಲ್ಲಾ ಸಂಬಾಳಿಸಿ , ಗೆದ್ದು ಮುಂದೆ ಸಾಗಬೇಕೇ ಹೊರತು ಮಳ್ಳ(ಕಳ್ಳಬೆಕ್ಕು)ನ ಹಾಗೆ ಅವರೊಡನೆಯೇ , ಅವರಂತೆಯೇ ಇದ್ದುಕೊಂಡು ಹೋಗಬಾರದಯ್ಯ ಗೆಳೆಯ ! ಕಳ್ಗುಡಿದವರು ದಾರಿ ತಿಳಿಯದೆ ಸಿಕ್ಕ ಆಧಾರವೊಬ್ಬರ ಕೈಹಿಡಿದು ಸಭ್ಯನಂತೆ ಸೋಗು ಹಾಕುತ್ತಾ ಸಾಗುವಂತೆ ನಾವು ಸಾಗುವುದು ಬೇಡ. ಈ ಕಳ್ಳರನ್ನೂ , ಸುಳ್ಳರನ್ನೂ ಹಿಡಿದು ಕಟ್ಟಿ ಆತ್ಮೋದ್ಧಾರಗೈವ ಶಕ್ತಿ ನಮ್ಮಲ್ಲೇ ಇರುವಾಗ ಮೂರ್ಖರಂತೆ ವರ್ತಿಸುತ್ತಿರುವುದಾದರೂ ಏಕೆ !? ಸ್ವಲ್ಪ ಯೋಚಿಸಲೇ ಬೇಕು ! ಅಲ್ಲವೇ ಗೆಳೆಯರೇ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021