ಮಾತಿನೊಡೆಯ
ಮಾತು ಮಾತೇ ಬೆಳೆದು ಮಾತಿಂಗೆ ಹೇತು ತಾ
ಮಾತು ಕಿಡಿ ಕಲಹಂಗಳಿಗೆ ಮೂಲವಯ್ಯ
ಮಾತಿರದೆ ಮೌನದೊಳು ಕಜ್ಜವೆಸಗುತ ದುಡಿದೊ
ಡಾತ ಮಾತಿಂಗೊಡೆಯ ಜಾಣಮೂರ್ಖ//
ಮಾತೇ ಮುತ್ತು ಮಾತೇ ಮೃತ್ಯು ಯಾರಿಗೆ ಗೊತ್ತಿಲ್ಲ ಈ ಮಾತು ಹೇಳಿ ! ಮಾತು ಪ್ರಕೃತ ಎಷ್ಟು ಬೇಕೋ ಅಷ್ಟಿದ್ದರೆ ಚನ್ನ. Talk sweet , Talk smooth and Talk less ಈ ತತ್ತ್ವಕ್ಕೆ ಬದ್ಧರಾಗಿದ್ದರೆ ನಮ್ಮ ವ್ಯಕ್ತಿತ್ವಕ್ಕೆ ಸಿಗುವ ಮನ್ನಣೆಯೇ ಬೇರೆ. ಅದು ಬಿಟ್ಟು ಮಾತಿಗೆ ಮಾತು ಬೆಳೆದು ಅದು ಬರೀ ವ್ಯರ್ಥ ಮಾತಿಗೆ ಕಾರಣವಾಗುತ್ತದೆ ಅಷ್ಟೆ. ಕಲಹಗಳಿಗೂ ಕಾರಣವಾಗುತ್ತದೆ. ಅದಕ್ಕೇ ತಿಳಿದವರು ಮೌನಕ್ಕೆ ಶರಣಾಗಿಬಿಡುತ್ತಾರೆ. ಮಾತಿನಿಂದಾಗಬಹುದಾದ ಅವಘಡಗಳನ್ನು ತಪ್ಪಿಸಿ ಶಾಂತವಾಗಿರುತ್ತಾರೆ. ಮಾತು ಬೆಳ್ಳಿ ಮೌನ ಬಂಗಾರ ಎನ್ನುವರಲ್ಲ ಹಾಗೆ. ಮನಸ್ಸಿನ ಜೊತೆಗೆ ಮಾತನ್ನೂ ಸಹ ತಮ್ಮ ಹತೋಟಿಯಲ್ಲಿಟ್ಟು ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತಿರುವ ಅವರೇ ನಿಜವಾದ ಮಾತಿನ ಒಡೆಯರು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021