ನಿರ್ಲಿಪ್ತ
ದೇಹಕಂಟಿದ ಕೇಶ ಉಗುರ ಕತ್ತರಿಸಿದೊಡೆ
ನೇಹವೋ ! ನೋವೀಯದೆಂತ ಬಾಂದವ್ಯ!
ದೇಹ ಮೋಹಂಗಳೆರಡಿಂತಿರಲು ನಿರ್ಲಿಪ್ತ
ದಾಹವಳಿವುದೊ ದಿಟದಿ ಜಾಣಮೂರ್ಖ//
ಸ್ನೇಹಿತರೇ, ಇದೆಂತಹಾ ವಿಚಿತ್ರ ನೋಡಿ ಈ ಶರೀರಕ್ಕಂಟಿದ ಉಗುರು , ಕೂದಲುಗಳನ್ನು ಕತ್ತರಿಸಿದರೂ ಸ್ವಲ್ಪವೂ ನೋವಾಗೋದಿಲ್ಲ. ಅದೆಂತಹಾ ಸ್ನೇಹ ಬಾಂಧವ್ಯ ಅವೆರಡರ ನಡುವೆ ! ಆದರೆ ಕತ್ತರಿಸೋ ಸಾಧನವು ಶರೀರಕ್ಕೆ ತಾಗಬಾರದು ಅಷ್ಟೆ . ಈ ಶರೀರ ಮತ್ತು ಮನಸ್ಸಿಗಂಟಿದ ಮೋಹ ಹೀಗೇ ಬೇರ್ಪಟ್ಟರೆಷ್ಟು ಚಂದ. ಅಲ್ಲವೇ !? ನಿರ್ಲಿಪ್ತರಾಗಿಬಿಡುತ್ತೇವೆ ! ಲೌಕಿಕ ವ್ಯಾಮೋಹವೇ ಇಲ್ಲದ ಮೇಲೆ ಎಷ್ಟು ನಿರಾತಂಕ ಬದುಕು! ಎಲ್ಲ ರೀತಿಯ ದಾಹಂಗಳಳಿದು , ಮೋಹಂಗಳಳಿದು ಲೌಕಿಕ ಬದುಕಿಗೆ ಅಂಟಿಯೂ ಅಂಟದಂತೆ ಬದುಕಿದರೆ ಎಷ್ಟು ಚಂದ ! ಆದರೇನು ಮಾಡುವುದು ಈ ದೇಹ ಮತ್ತು ಮನದ ವ್ಯಾಮೋಹಗಳು ಒಂದನ್ನೊಂದು ಬಿಡುವುದೇ ಇಲ್ಲ! ಎಂತಹಾ ಅಪೂರ್ವ ಸೃಷ್ಟಿ ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021