ನಿನ್ನರಿವೆ ಗುರು ನಿನಗೆ
ನಿನ್ನ ಮರೆವೆಯೆ ನಿನಗೆ ದುಃಖದೊಳ್ದೂಡುತಿದೆ
ನಿನ್ನಿಂದಲೇ ನಿನಗೆ ಸಂಕಟವದರಿಯೊ
ನಿನ್ನ ಮರೆವೆಯ ತೆರೆಯ ನೀನೆ ಸರಿಸಲು ಬೇಕು
ನಿನ್ನರಿವೆ ಗುರು ನಿನಗೆ ಜಾಣಮೂರ್ಖ//
ಓ ಗೆಳೆಯಾ , ನಮ್ಮೆಲ್ಲಾ ಕಷ್ಟಪರಂಪರೆಗಳಿಗೆ ನಮ್ಮ ಅಜ್ಞಾನವೇ ಕಾರಣವಾಗಿದೆ. ಅದೇ ನಮ್ಮನ್ನು ದುಃಖದಲ್ಲಿ ದೂಡುತ್ತಿದೆ. ನಮ್ಮ ಸಂಕಟಕ್ಕೂ ನಾವೇ ಕಾರಣರು. ಮತ್ತೆ ಅದನ್ನು ನಾವೇ ಕಳೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಅರಿವೇ ನಮಗೆ ಗುರುವಿನೋಪಾದಿಯಲ್ಲಿ ನಿಂತು ಸಹಾಯ ಮಾಡುತ್ತದೆ. ಗುರುವಿನ ವ್ಯಾಪ್ತಿ ಅನಂತ. ಅದರ ಆಳ ಹರವುಗಳು ನಮ್ಮಳವನ್ನು ಮೀರಿದುದು. ಗುರುವಿಗೆ ಭಕ್ತಿಯಿಂದ ನಿಷ್ಠನಾಗಿದ್ದು ಕಠಿಣ ಪರಿಶ್ರಮದಿಂದ ಗಳಿಸಿದ ಅರಿವು ನಮ್ಮ ತಲೆಕಾಯುತ್ತದೆ. ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಫಲ ಕೊಡದೇ ಇರುವುದಿಲ್ಲ ! ನಿಷ್ಠೆ ಬೇಕಷ್ಟೆ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021