ವಿಸ್ಮಯ ಪ್ರಪಂಚ
ಮನೆಗು ಮುನ್ನವು ಬಯಲು ಮನೆಬೀಳೆ ಬಯಲಂತೆ
ತನುವೆಂಬ ಮನೆಹುಟ್ಟಿ ಬೀಳೆ ಬರಿ ಬಯಲು
ಘನಮನೆಯು ಬಯಲಪ್ಪುದಚ್ಚರಿಯ ಕಾಣೇಳು
ಕೊನೆಗೆಲ್ಲವೂ ಬಯಲೊ ಜಾಣಮೂರ್ಖ//
ನಾನು ಅರಮನೆಯ ಕಟ್ಟಿಸಿದೆ ಎಂದು ಬೀಗುತ್ತಾನೆ ಮನುಷ್ಯ. ಒಂದು ದಿನ ಆ ಮನೆ ಬೀಳಲೇ ಬೇಕು. ಮನೆ ಕಟ್ಟುವ ಮುನ್ನ ಅಲ್ಲಿ ಬಯಲಿತ್ತು , ಆ ಮನೆ ಬಿದ್ದಮೇಲೂ ಬಯಲಿದೆ ! ಅಂದರೆ ಬಯಲು ಚಿರವೆಂದಾಯ್ತು ಅಲ್ಲವೇ !? ತನುವಿನ ಮನೆಯೂ ಚಿರವಲ್ಲ ! ಅದೂ ಬಯಲಲ್ಲಿ ಬಯಲಾಗಿ ಹೋಗುತ್ತದೆ. ಚಿರವೆಂಬ ಭ್ರಮೆ ಮಾತ್ರ ನಮ್ಮದು ! ಎಂತಹಾ ಅಚ್ಚರಿಯಲ್ಲವೇ !? ಈ ಭ್ರಮೆಯಲ್ಲೇ ಬದುಕುತ್ತಿರುವುದೂ ಅಂತೆಯೇ ಭ್ರಮೆಯಲ್ಲೇ ಬಯಲಾಗೋದೂ ಸಹ ಸತ್ಯ! ಅಲ್ಲಿಯ ವರೆಗೂ ಅರಿವಾಗದಿರೋದೂ ಸಹ ಅಚ್ಚರಿಯೇ ! ಕೊನೆಗೆಲ್ಲವೂ ಬಯಲೋ ಬಯಲು ! ಅಷ್ಟೆ ! ಒಟ್ಟಿನಲ್ಲಿ ವಿಸ್ಮಯ ಪ್ರಪಂಚ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021