ಮಸ್ತಕದೊಳಿಡು ಅರಿವ
ಬೆಸ್ತು ಬೀಳುತ ಮೀನು ಹಾವು ಕಪ್ಪೆಗಳೆಲ್ಲ
ಬೆಸ್ತನಾ ಬಲೆಗೈದು ಬಿದ್ದರೇನಂತೆ !
ಬೆಸ್ತನೊಳ್ಳೆಯ ಮೀನನೊಯ್ವವೊಲು ಸುಜ್ಞಾನ
ಮಸ್ತಕದೊಳಿಡು ಅರಿವ ಜಾಣಮೂರ್ಖ//
ಈ ಮುಕ್ತಕದಲ್ಲಿ ಬಂದಿರೋ ಬೆಸ್ತನಾಗಬಹುದು , ಮೀನು , ಹಾವು , ಕಪ್ಪೆ , ಬಲೆ ಇವೆಲ್ಲಾ ಸಂಕೇತಗಳಷ್ಟೆ. ಬೆಸ್ತನು ಒಳ್ಳೆಯ ಮೀನುಗಳನ್ನು ಮಾತ್ರ ಆಯ್ದುಕೊಂಡು ಬಲೆಯಲ್ಲಿ ಸಿಕ್ಕ ಇತರೆ ಕೆಲಸಕ್ಕೆ ಬಾರದ ಕಪ್ಪೆ ಹಾವು ಇತ್ಯಾದಿಗಳನ್ನೆಲ್ಲಾ ಬಿಸಾಡುವಂತೆ ನಾವೂ ಸಹ ನಮ್ಮ ಸುತ್ತಣ ಸಮಾಜದಲ್ಲಿರುವ ಒಳಿತು ಕೆಡುಕುಗಳನ್ನೆಲ್ಲಾ ತೂಗಿ ನೋಡಿ ಒಳಿತನ್ನು ಮಾತ್ರ ಆಯ್ದುಕೊಂಡು ಬೇಡದುದನ್ನು ಪರಿತ್ಯಜಿಸಬೇಕು. ಆಗ ಸಹಜವಾಗಿಯೇ ಬದುಕು ಸುಂದರ ಮತ್ತು ಅರ್ಥಪೂರ್ಣವಾಗಿರುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021