ಗುಳ್ಳೆನರಿಯಾಟ ಬಿಡೊ
ಎಳ್ಳಿನೊಳಗೆಣ್ಣೆಯೊಲು ಕಲ್ಲಿನೊಳ ಬೆಂಕಿಯೊಲು
ಸುಳ್ಳಿನೊಳಗಡಗಿರುವ ಸತ್ಯದೊಲು ದೈವ
ಉಳ್ಳೆವೈ ದೇಹದೊಳೆ ದೈವದಾವಾಸವರಿ
ಗುಳ್ಳೆನರಿಯಾಟ ಬಿಡೊ ಜಾಣಮೂರ್ಖ//
ಎಳ್ಳಿನಲ್ಲಿ ಎಣ್ಣೆಯಿರುವಂತೆ , ಕಲ್ಲಿನಲ್ಲಿ ಬೆಂಕಿ ಇರುವಂತೆ ಹಾಗೆಯೇ ಸುಳ್ಳಿನೊಳಗೇ ಇರುವ ಸತ್ಯದಂತೆ ಸೂಕ್ಷ್ಮರೂಪಿನಿಂದ ಭಗವಂತನಿದ್ದಾನೆ. ನಮ್ಮಲ್ಲೇ ಇದ್ದಾನಾದರೂ ನೋಡುವವರ , ನಲಿಯುವವರ ಸಂಖ್ಯೆ ಮಾತ್ರ ಬಹು ವಿರಳ ! ಗುಡಿ , ಚರ್ಚು ಮಸೀದಿಗಳಲ್ಲಿ ಹುಡುಕುತ್ತೇವೆ ಅಜ್ಞಾನದಿಂದ. ಅದು ಅಜ್ಞಾನವೆಂದು ತಿಳಿದಿದ್ದರೂ ಅದೇ ಸರಿಯೆಂಬಂತೆ ವರ್ತಿಸುತ್ತೇವೆ ಅಜ್ಞಾನದಿಂದ ! ಸತ್ಯವರಿತರೂ ಸಹ ಮಾನವರಾದ ನಾವು ಗುಳ್ಳೆನರಿಯಂತಾಡುತ್ತಾ ಕಾಲಹಾಕುತ್ತಿದ್ದೇವೆ. ಕಾಲನೈದುವ ಮುನ್ನ ಬರೀ ಕಾಲ ಹಾಕದೇ ಸತ್ಯವನ್ನರಿತು ಮುಕ್ತರಾಗಬೇಕಿದೆ. ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021