ಘನವಳಿದು ಘನನಾಗೊ
ತನು ಕರಗದಾ ಮೇಲೆ ಜಪತಪದಿ ಫಲವೇನು?
ಮನವು ಅರಳದೆ ಬರಿದೆ ಮಡಿ ಮಾಡಲೇನು?
ಧನಮಿರ್ದೊಡೇನು ಸತ್ಪಾತ್ರಕ್ಕೆ ಸಲ್ಲದಿರೆ
ಘನವಳಿದು ಘನನಾಗೊ ಜಾಣಮೂರ್ಖ//
ಜೀವಶಿವಸೇವೆಯಲ್ಲಿ , ದಯೆ ಕಾರುಣ್ಯಗಳಲ್ಲಿ ತನು ಕರಗದ ಮೇಲೆ ಬರೀ ಜಪ ತಪಗಳನ್ನಾಚರಿಸಿದ ಮಾತ್ರಕ್ಕೆ ಯಾವ ಪ್ರಯೋಜನವೂ ಇಲ್ಲ. ಮನಸ್ಸು ಪ್ರೀತಿಯಿಂದ ಮೃದುವಾಗಬೇಕು ! ಅರಳಬೇಕು , ಇಂದು ಕೆರಳುತ್ತಿದೆ! ಕೆರಳಿದ , ಮಲಿನಗೊಂಡ ಮನಸ್ಥಿತಿಯಲ್ಲಿ ಒದ್ದೆಯುಟ್ಟು ಮಡಿ ಆಚರಿಸಿದರೇನು ಬಂತು!? ನಮ್ಮ ಬಳಿ ಹೇರಳವಾಗಿ ಸಂಪತ್ತು ಇದ್ದರೇನು ಬಂತು ! ಅದು ಸತ್ಪಾತ್ರಕ್ಕೆ ಸಲ್ಲಬೇಕು. ಅಂದರೆ ಒಳ್ಳೆಯ ಕಾರ್ಯಕ್ಕೆ ವಿನಿಯೋಗವಾಗಬೇಕು. ಇಲ್ಲದಿದ್ದರೆ ವ್ಯರ್ಥ. ಘನವಳಿದು ನಾವು ಘನರಾಗಬೇಕು. ಅಂದರೆ ಮನದ ಕಾಠಿಣ್ಯವಳಿದು ಘನತೆ ಉಳ್ಳವರಾಗಬೇಕು. ಆಗ ಬದುಕು ತುಂಬಾ ಸುಂದರ ಮತ್ತು ಶಾಂತವಾಗಿರುತ್ತದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021