ನಶೆ
ಸೆರೆಗುಡುಕಗಿಹುದು ನಶೆ ಕುಡಿಯದವಗೂ ನಶೆಯೆ?
ಇರಲಿ ಭಕ್ತಿಯ ನಶೆಯು ನಶೆಯ ನಾಟಕವೆ?
ಸಿರಿಯ ನಶೆಯಹಮ ನಶೆ ಧರೆ ತನ್ನದೆಂಬ ನಶೆ
ಪೊರೆದವನ ಮರೆಯದಿರೊ ಜಾಣಮೂರ್ಖ//
ಸಾಮಾನ್ಯವಾಗಿ ಕುಡಿದವರಿಗೆ ನಶೆ ಇರುತ್ತದೆ. ಆದರೆ ಈ ಜಗತ್ತಿನಲ್ಲಿ ಕುಡಿಯದವರೂ ಸಹ ನಶೆಯಿದೆ. ಭಕ್ತ ಕುಂಬಾರನದು ಭಕ್ತಿಯ ನಶೆ ! ಅದು ಆರೋಗ್ಯಕರ ನಶೆ. ಇರಲಿ ಬಿಡಿ. ಆದರೆ ರಾವಣನ ನಶೆ ! ದುರ್ಯೋಧನನ ನಶೆ ! ಅವರಿಗಿದ್ದುದು ಅಷ್ಟಮದಗಳ ನಶೆ. ಅಧಿಕಾರ ನಶೆ ! ಅಹಂಕಾರದ ನಶೆ ! ಇದಕ್ಕೆ ಸೆರೆ ಕುಡಿಯಲೇ ಬೇಕೆಂದಿಲ್ಲ ! ಒಂತರ ನಶೆಯ ನಾಟಕ ಅದು. ಅದೇನಾದರೂ ಇರಲಿ. ಇಡೀ ಜಗತ್ತನ್ನೇ ಪೊರೆಯುತ್ತಿರುವ ದಿವ್ಯ ಶಕ್ತಿಯನ್ನು ಮರೆತು ಈ ನಶೆಯ ಧೋರಣೆ ತೋರಿಸುವುದು ಸರಿಯೇ !? ಅದಕ್ಕೇ ಈ ರೀತಿ ಯುಗಾಂತ್ಯವೋ ಏನೋ ! ಸಾತ್ವಿಕವಾದ ನಶೆ ಎಲ್ಲರಲ್ಲೂ ಆವರಿಸಬೇಕಾದ ಅಗತ್ಯವಿದೆ ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021