ಜೀವ ದೀವಿಗೆ
ನೋವಿನಾ ಸೊಡರಿಂಗೆ ನೋವ ತೈಲವನೆರೆದು
ನೋವ ಬೆಳಕಲಿ ಬಾಳ್ಗೆ ನಲಿವಿನಾ ಗುರಿಯೊ !
ಜೀವನದ ಪಯಣದೊಳಗಿದೆ ಬಾಳಿನುದ್ದಕ್ಕು
ಜೀವ ದೀವಿಗೆ ಬತ್ತಿ ಜಾಣಮೂರ್ಖ//
ಈ ಬದುಕಲ್ಲಿ ನೋವಿಲ್ಲವರಾರು? ಸಾವಿಲ್ಲದವರಾರು ? ಆದರೆ ಬಾಳಿನ ಗುರಿ ಮಾತ್ರ ನಲಿವು! ನೋವಿನ ಸೊಡರಿಗೆ ನೋವಿನ ತೈಲವನ್ನೆರೆದು ನೋವೆಂಬ ಬೆಳಕಿನ ಹರಡುವಿಕೆಯಲ್ಲಿ ನೋವೇ ಜೀವನವಾಗಿ ಪಯಣ ಸಾಗಿದೆ. ಭಗವಂತನ ಕೃಪೆಯಿಂದ ಅಲ್ಲಲ್ಲಿ ಸಂತಸದ ಪ್ರಖರ ಬೆಳಕಿದೆ ! ಈ ಜೀವವೇ ಬತ್ತಿಯಾಗಿದೆ. ಬತ್ತಿ ತಾನುರಿದು ಬೆಳಕಿತ್ತು ಧನ್ಯತೆಯ ಪಡೆವಂತೆ ನಮ್ಮ ಬದುಕೂ ಸಹ ಲೋಗರ ಬದುಕಿಗೆ ಬೆಳಕಾಗಿ ಧನ್ಯವಾಗಬೇಕಿದೆ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021