ಒಳವ್ಯಾಪಾರ
ಹೊರಗಿನೀ ವ್ಯಾಪಾರ ಮೋಹವನು ಕಳಚೊಮ್ಮೆ
ಸಿರಿಯಾಡುತಲಿ ಕಾಣು ಒಳಗಿನಾ ಬಯಲ
ಗುರಿಯಿರದೆ ಹರಿದು ನದಿ ಸಾಗರವ ಸೇರ್ವಂತೆ
ಹರಿ ಮೋಕ್ಷ ಕಡಲೆಡೆಗೆ ಜಾಣಮೂರ್ಖ //
ಹೊರಬದುಕಿನ ನಮ್ಮ ಮನೋವ್ಯಾಪಾರವನ್ನು ಬದಿಗಿಟ್ಟು ಒಳಗೆ ವಿಹರಿಸಬೇಕು. ಆ ಆಂತರ್ಯದ ಓಡಾಟ ಬಹುಚಂದ ! ಅದು ಅಲ್ಲಿ ನಡೆಯಲು ಬರುವವರಿಗೆ ಮಾತ್ರ. ಬಂದವರು ಸಿರಿಯಾಡುತ್ತಾರೆ. ಅಂತರ್ಜೀವಿಗಳಾಗಿಬಿಡುತ್ತಾರೆ. ಲೌಕಿಕದ ಹೊರವ್ಯಾಪಾರ ಅವರಿಗೆ ರುಚಿಸದು ! ಹರಿವ ನದಿ ಗೊತ್ತು ಗುರಿ ಇರದೆ ಶಾಂತವಾಗಿ ಹರಿದು , ಜಲಪಾತವಾಗಿ ಭೋರ್ಗರೆದು ಸಾಗರವ ಸೇರಿ ಧನ್ಯತೆಯ ಪಡೆವಂತೆ ಬದುಕಿನ ನಾನಾ ಅವಸ್ಥೆಗಳನ್ನು ಶಾಂತರೀತಿಯಲ್ಲಿ ಸ್ವೀಕರಿಸಿ ನಾವೂ ಸಹ ಮೋಕ್ಷ ಸಾಗರವನ್ನು ಸೇರಿ ಧನ್ಯರಾಗಬೇಕು, ಕೃತಾರ್ಥರಾಗಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021