ಬಲ್ಲಿದನ ಬಿಡದಿರೆಲೊ
ಕಲ್ಲ ದೋಣಿಯನೇರಿ ಕಡಲ ದಾಟುವ ತೆರದಿ
ಮುಳ್ಳ ಬೇಲಿಯ ಹಾದು ದಡವ ಸೇರ್ವಂತೆ
ಸಲ್ಲದಾ ಮಾಯೆಯೊಡೆ ಬಾಳ ಸಾಗರವೀಸೆ
ಬಲ್ಲಿದನ ಬಿಡದಿರೆಲೊ ಜಾಣಮೂರ್ಖ//
ಕಡಲನ್ನು ದಾಡಬೇಕು. ಆದರೆ ಕಲ್ಲ ದೋಣಿಯೇರಿ ಮುಂದೆ ಸಾಗಿದಂತಾಗಿದೆ ಬದುಕು ! ದಡವನ್ನೇನೋ ಸೇರಬೇಕು , ಆದರೆ ಸುತ್ತಲೂ ಮುಳ್ಳಬೇಲಿ ! ತುಂಬಾ ಜಾಗ್ರತೆಯಿಂದ ಹೆಜ್ಜೆಯಿಡಬೇಕು. ಇಲ್ಲದಿದ್ದರೆ ಮುಳ್ಳು ಚುಚ್ಚುತ್ತದೆ. ಹಾಗೆಯೇ ಬಾಳ ಸಾಗರ ಸಹ ! ದಡ ಮುಟ್ಟುವುದು ಬಹು ಕಷ್ಟ. ಬಹು ಜಾಗರೂಕರಾಗಿ ಸಾಗಬೇಕು. ಜಾಗರೂಕರಾಗಿ ಅನ್ನೋ ಪದದ ವ್ಯಾಪ್ತಿ ಬಹಳಷ್ಟು ದೊಡ್ಡದು. ಅದನ್ನು ಜನರು ಅವರವರ ದೃಷ್ಟಿಕೋನಕ್ಕನುಗುಣವಾಗಿ , ಸಂಸ್ಕಾರಕ್ಕನುಗುಣವಾಗಿ ನಿರ್ಧರಿಸುತ್ತಾರೆ. ಏನೇ ಆದರೂ ಜಗತ್ತನ್ನೇ ನಡೆಸುತ್ತಿರುವ ದಿವ್ಯಶಕ್ತಿಯ ಕೈ ಬಿಡದೆ ನಂಬಿ ನಡೆಯಬೇಕಾದುದು ಅಗತ್ಯ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021