ಸತ್ಯ-ಮಿಥ್ಯ
ಸತ್ಯ ಪೇಳಲು ಪೋಗೆ ಮಿಥ್ಯಮೆಂದರು ಜನರು
ಮಿಥ್ಯಮಂ ಸತ್ಯದೊಲು ನಂಬಿ ನಚ್ಚಿದರು
ಮಿಥ್ಯ ಸತ್ಯವ ಕಂಡು ಬೀಗೆ ನಷ್ಟವದೇನು ?
ಸತ್ಯಮೆಂದಿಗು ಸತ್ಯ ಜಾಣಮೂರ್ಖ//
ಎತ್ತ ಸಾಗುತ್ತಿದ್ದೇವೆ ನಾವು ! ಈಗ ನೀವೇ ನೋಡಿ ಸತ್ಯ ಹೇಳಿದರೆ ನಂಬದ ನಮ್ಮ ಜನ ಸುಳ್ಳು ಹೇಳಿದರೆ ಬೇಗ ನಂಬುತ್ತಾರೆ. ಸತ್ಯವನ್ನು ಮಿಥ್ಯ ಎನ್ನುತ್ತಾರೆ ! ಇದೇನು ಕಾಲವೈಪರೀತ್ಯವೋ ! ಕಲಿಯುಗದ ಮಹಿಮೆಯೋ ! ಒಂದೂ ಅರ್ಥವಾಗುತ್ತಿಲ್ಲ. ಇದರಿಂದ ಉಬ್ಬಿದ ಮಿಥ್ಯವು ಸತ್ಯವನ್ನು ಕಂಡು ಬೀಗಿದರೆ ಸತ್ಯಕ್ಕೇನೂ ನಷ್ಟವಿಲ್ಲ. ಸತ್ಯ ಎಂದಿಗೂ ಸತ್ಯ. ಅದು ಬೂದಿ ಮುಚ್ಚಿದ ಕೆಂಡ. ಒಂದು ದಿನ ಪ್ರಕಟಗೊಳ್ಳುತ್ತದೆ ಸತ್ಯಾಗ್ನಿ ! ಅದರ ಜಾಜ್ವಲ್ಯಮಾನ ಪ್ರಕಾಶದಲ್ಲಿ ಮಿಥ್ಯ ಕಾಣದಾಗುತ್ತದೆ ಇದೇ ಸತ್ಯವು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021