ಶಿವಪಥ
ಜವನ ಕಾಣದೆ ಶಿವನ ಕಂಡನಾ ಮುನಿಬಾಲ
ಭವದ ಗುರಿಯಭವನಾ ಚರಣದೊಳು ನಿಲಿಸಿ
ಅವಲೀಲೆಯಿಂ ಭವವ ಗೆಲುವ ತತ್ತ್ವವನರುಹಿ
ಶಿವ ಮೆರೆದನಿದನರಿಯೊ ಜಾಣಮೂರ್ಖ//
ಏಳೆಂಟು ವರ್ಷದ ಮುನಿಬಾಲಕ ಮಾರ್ಕಂಡೇಯನಿಗೆ ಒಂದು ವಾರ ಮುನ್ನವೇ ಯಮರಾಯನು ಬಂದು ತನ್ನ ಪ್ರಾಣವನ್ನು ಕೊಂಡೊಯ್ಯುವ ಸುಳಿವು ಸಿಕ್ಕಿತು ! ಜಾಗೃತನಾದ ಮುನಿಬಾಲ ಅನನ್ಯ ಭಕ್ತಿಯಿಂದ ಭಜಿಸಿದ. ಶಿವಲಿಂಗವನ್ನು ಅಪ್ಪಿದ, ತನ್ನನ್ನು ಹುಟ್ಟು ಸಾವಿನ ಸುಳಿಯಿಂದ ಎತ್ತಿಕೊಂಡು ಕಾಪಾಡೆಂದು ಬೇಡಿದ. ಮನವನ್ನು ಶಿವನ ಪಾದಾರವಿಂದಗಳಲ್ಲಿ ನೆಲೆ ನಿಲ್ಲಿಸಿದ ! ಜವನನ್ನು ಕಾಣಬೇಕಿದ್ದವನು ಶಿವನನ್ನು ಕಂಡು ಧನ್ಯನಾದ. ಮರಣವನ್ನೇ ಗೆದ್ದ ! ಶಿವಸಾಯುಜ್ಯವನ್ನು ನೀಡಿದ ಶಿವನು ಜಗತ್ತಿಗೆ ಅವಲೀಲೆಯಿಂದ ಭವವ ಗೆಲ್ಲುವ ತತ್ತ್ವವನ್ನು ತಿಳಿಸಿ ದಾರಿ ತೋರಿದ್ದಾನೆ. ನಾವು ಕಥೆ ಕೇಳುತ್ತೇವೆ ! ಆತ್ಮಾನುಸಂಧಾನದ ಹಂತ ತಲುಪುವುದೇ ಇಲ್ಲ ! ಸಾಕ್ಷಾತ್ ಶಿವನೇ ದಾರಿ ತೋರಿದರೂ ಅಡ್ಡದಾರಿ ಹಿಡಿದು ದಾರಿ ತಪ್ಪುತ್ತೇವೆ. ಎಂತಹಾ ವಿಪರ್ಯಾಸವಲ್ಲವೆ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021