ಕಡೆ ಹಾಯಿಸುವ ಗುರುವು
ಕಡುಮೂರ್ಖನಾಗಿರಲಿ ಜಾಣಮೂರ್ಖನೆ ಇರಲಿ
ಕಡುಗೋಪಿ ಪಂಡಿತರು ಲಂಪಟರೆ ಇರಲಿ
ಒಡನೆ ಯಾರಿರಲಿ ಬಿಡು ನೀನು ನೀನಾಗಿರಲು
ಕಡೆ ಹಾಯಿಸುವ ಗುರುವು ಜಾಣಮೂರ್ಖ //
ಈ ಜಗತ್ತಿನಲ್ಲಿ ನಾವು ತುಂಬಾ ಜನಗಳ ಜೊತೆ ವ್ಯವಹರಿಸಬೇಕಾಗುತ್ತದೆ. ಬದುಕಿನ ಪಯಣದಲ್ಲಿ ಯಾರ್ಯಾರೋ ಸಿಕ್ಕುತ್ತಾರೆ ! ಮೂರ್ಖರು ! ಜಾಣಮೂರ್ಖರು , ಕಡುಗೋಪಿಗಳು , ವಿಷಯ ಲಂಪಟರು , ಪಂಡಿತರು ಇನ್ನೂ ತುಂಬಾ ಜನ ಸಿಗುತ್ತಾರೆ. ನಮ್ಮ ಜೊತೆ ಎಂತಹವರೇ ಇರಲಿ ಬಿಡಯ್ಯಾ ಗೆಳೆಯ. ನಾವು ನಾವಾಗಿದ್ದರಾಯ್ತು. ನಮ್ಮ ಮನಸ್ಸು ನಮ್ಮ ಕೈಲಿರಬೇಕು. ಗುರಿಯನ್ನು ಗೊತ್ತುಪಡಿಸಿಕೊಂಡು ಆ ದಾರಿಗುಂಟ ಸಾಗಬೇಕು. ಒಳಿತನಾಚರಿಸುತ್ತಾ ಸಾಗಿದರೆ ನಂಬಿದ ಗುರುವು ದಡ ಮುಟ್ಟಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಅಲ್ಲವೇ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021