ಜರಡಿಯ ಜಲ
ಜರಡಿಯೊಳ ಜಲದಂತೆ ತನ್ನನರಿತವನಯ್ಯ
ಇರಿಸಿಕೊಳ್ಳನುಮೇನನೆಲ್ಲವೂ ಖಾಲಿ !
ಮರೆವುಮೆಲ್ಲಿಯದವಗೆ ಸುರಿವನೆಲ್ಲವ ಬಿಡದೆ
ಅರಿವು ಮರೆವೇನವಗೆ ಜಾಣಮೂರ್ಖ//
ತನ್ನನ್ನು ತಾನರಿತ ಜ್ಞಾನಿಯು ಸದಾ ಖಾಲಿಯಾಗಿರುವನು. ಜರಡಿಯಲ್ಲಿ ಜಲವು ಹೇಗೆ ನಿಲ್ಲುವುದಿಲ್ಲವೋ ಹಾಗೆ ತನ್ನನ್ನು ತಾನರಿತ ಜ್ಞಾನಿಯೂ ಸಹ ಸದಾ ತನ್ನ ಅರಿವನ್ನು ಹೊರಹಾಕಿ ಖಾಲಿಯಾಗುವನು. ಅವನು ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳನು ! ಅಂತಹಾ ಜ್ಞಾನಿಗೆ ಬದುಕಿನ ಮರೆವೆಂತದು !? ಅರಿವೆಂತದು !? ಅರಿವು ಮರೆವಿನ ಭೇದ ತೂರಿದವನವನು. ನಮ್ಮಗಳಿಗೆ ಒಂದೇ ಬಾರಿಗೆ ಆ ಎತ್ತರಕ್ಕೇರುವುದು ಕಷ್ಟವಾದರೂ ಅಸಾಧ್ಯವೇನಲ್ಲ ! ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021