ಗತಿಯ ಗಮನಿಸುತಿರೈ
ಮತಿಗೆ ತೋರ್ಪುದುಮೆಲ್ಲ ನಿಜಮಾದೊಡೆಂತು ಪೇಳ್ ?
ಗತಿಯ ಗಮನಿಸುತಿರೈ ಸ್ಥಿರಮಾವುದಿಲ್ಲಿ ?
ಮಿತಿಯೊಳಿರು ಕೆಳೆಯ ನೀ ಸ್ಥಿತಪ್ರಜ್ಞನಾಗಿ ನಡೆ
ಅತಿಬೇಡವೆಲ್ಲಿಯುಂ ಜಾಣಮೂರ್ಖ//
ಸ್ನೇಹಿತರೇ, ನಮ್ಮ ಮನಸ್ಸನ್ನು ಹಾಗೇ ಸೂಕ್ಷ್ಮವಾಗಿ ಗಮನಿಸಿ ! ಇಲ್ಲಿ ಮೂಡುವ ಎಲ್ಲವೂ ನಿಜವಲ್ಲ ! ನಮ್ಮ ಕಣ್ಣಿಗೆ ಕಾಣೋದಾಗಲಿ, ಕೈಗೆ ಸಿಗೋದಾಗಲಿ ಬದಲಾಗದೇ ಹಾಗೇ ಸ್ಥಿರವಾಗಿ ಇರುವುದೇನು? ಹಾಗಾದರೆ ಯಾವುದೂ ಸ್ಥಿರವೂ ಅಲ್ಲ ! ಹಾಗೇ ಚಿರವೂ ಅಲ್ಲ ತಾನೆ !? ಅಷ್ಟೇ ಏಕೆ ಈ ದೇಹದ ಅವಸ್ಥೆಗಳಾದರೂ ಸ್ಥಿರವೇನು ! ಕಾಲಗತಿಗೆ ತಕ್ಕಂತೆ ಆಯಾ ಕಾಲಕ್ಕೆ ಏನು ನಡೀಬೇಕೋ ಅದೆಲ್ಲಾ ನಡೆಯುತ್ತದೆ. ಯಾವುದೂ ನಮ್ಮ ಕೈಲಿರದು. ನನ್ನ ಕೈಲಿದೆ ಅನ್ನೋದು ಒಂದು ಭ್ರಮೆಯಷ್ಟೆ ! ಆದ್ದರಿಂದ ಸ್ಥಿತಪ್ರಜ್ಞರಾಗಿ ನಡೆಯೋದು ಅವಶ್ಯಕ. ಆಗಲೇ ರಾಗದ್ವೇಷಾದಿ ಭಾವನೆಗಳಿಂದ ಮುಕ್ತಿ ಸಾಧ್ಯ . ಯಾವುದನ್ನೂ ಅತಿಮಾಡದೆ ಒಂದು ಮಿತಿಯಲ್ಲಿ ಬದುಕಿ ಮುಕ್ತಿಪಥದಲ್ಲಿ ಸಾಗೋಣ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021