ಹೊಸತು ಹಳತೆಲ್ಲ ಮೀರ್
ಹೊಸದಾದ ಮನೆಕಟ್ಟೆ ಹಳೆಯದಗದೆ ಪೇಳು
ಹೊಸ ಬಟ್ಟೆ ಹೊಸದಾಗೆ ಉಳಿವುದುಂಟೇನು?
ಕಸುವಿರದ ಮೋಹದೊಳ್ಬಸವಳಿದು ಬೀಳದಿರು
ಹೊಸತು ಹಳತೆಲ್ಲ ಮೀರ್ ಜಾಣಮೂರ್ಖ //
ಈಗ ನಾವೊಂದು ಹೊಸದಾದ ಮನೆ ಕಟ್ಟುತ್ತೇವೆ ಎಂದಿಟ್ಟುಕೊಳ್ಳೋಣ. ಗೃಹಪ್ರವೇಶಕ್ಕೆ ಹೊಸದಾದ ಬಟ್ಟೆ ! ಎಲ್ಲವೂ ಹೊಸದು ! ಇದು ನನ್ನ ಮನೆ ! ಇದು ನನ್ನಬಟ್ಟೆ ! ಫೋಟೋ ತೆಗೆಸಿಕೊಂಡು ಅದನ್ನು ಸಂರಕ್ಷಿಸುತ್ತೇವೆ. ಆದರೆ ವಾಸ್ತವದಲ್ಲಿ ಮುಂದೆ ಅದೆಲ್ಲವೂ ಹಳೆಯದಾಗಲೇ ಬೇಕು. ನಮ್ಮ ಮೋಹಕ್ಕೆ ಕಿಂಚಿತ್ತೂ ಕಸುವಿಲ್ಲ. ವ್ಯರ್ಥ ಮೋಹವಷ್ಟೆ ! ಈ ಹೊಸತು , ಹಳತು , ನಾನು , ನನ್ನದು ಇವುಗಳನ್ನೆಲ್ಲಾ ಮೀರಿ ನಿಲ್ಲಬೇಕು. ಅತೀತರಾಗಬೇಕು. ಆಗ ನೋಡಿ ಬದುಕಿನ ರೀತಿ ಮತ್ತೊಂದು ತರಹೆ ವಿಭಿನ್ನವಾಗಿರುತ್ತದೆ. ಒಂದು ಸ್ತರದಲ್ಲಿ ನಾವು ಸ್ವಲ್ಪ ಎತ್ತರದಲ್ಲಿ ಇರುತ್ತೇವೆ. ಆದರೆ ಇನ್ನೂ ಎತ್ತರದ ಸ್ಥರವಿದೆ ಎಂಬುದನ್ನು ಮರೆಯದೆ ಎತ್ತರೆತ್ತರಕ್ಕೆ ಏರುತ್ತಾ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021