ಮೃಡತತ್ತ್ವಕಿಂ ಮಿಗಿಲೆ
ಕಡಲೆ ಬೆಲ್ಲವ ತರಲು ಕಡವರವನೊಯ್ವರೇಂ?
ಮೃಡನೆಡೆಗೆ ನಶ್ವರದ ಸಿರಿಯನೊಯ್ಯುವುದೆ?
ನಡೆವೆಡೆಗೆ ಕಡವರವ ಹಾಸಲೇಂ ಪೋಗದಿರು
ಮೃಡತತ್ತ್ವಕಿಂ ಮಿಗಿಲೆ ಜಾಣಮೂರ್ಖ //
ಒಂದಿಷ್ಟು ಕಡಲೆ ಬೆಲ್ಲವನ್ನು ತರಲು ಯಾರಾದರೂ ಬೆಲೆಬಾಳುವ ಬಂಗಾರವನ್ನು ಒಯ್ಯುವರೇ ? ಶಿವನನ್ನು ಕಂಡು ಕಣ್ದುಂಬಿ , ಮನದುಂಬಿ , ಕೃತಜ್ಞತೆಯಿಂದ ದಯಾಮಯನಿಗೆ ನಮಿಸಬೇಕಲ್ಲದೆ ನಶ್ವರವಾದ ಸಿರಿಯನ್ನು ಅವನಿಗಾಗಿ ಒಯ್ಯುವುದೇ ? ನಮಗೆ ಆ ಸಿರಿಯನ್ನು ಕೊಟ್ಟವರು ಯಾರು !? ಶಿವನಿಗೆ ನಾವು ಕೊಡಬೇಕಾದುದೇನು !? ಯೋಚಿಸಬೇಕಲ್ಲವೇ !? ಮೃಡತತ್ತ್ವದ ಸೊಗಡೇ ಬೇರೆ ! ಆ ಜಾಡೇ ವಿಭಿನ್ನ ! ಆ ಜಾಡಗುಂಟ ಸಾಗಬೇಕಯ್ಯ ಗೆಳೆಯ. ಇನ್ನು ಬೇರೆಯವರೆಲ್ಲಾ ನೀನು ನಡೆವ ದಾರಿಗೆ ಚಿನ್ನವನ್ನೇ ಸುರಿಯಲಿ ! ಹಾಸಲಿ ! ಅತ್ತ ಸಾಗಬೇಡಯ್ಯ. ಶಿವ ಸಾಯುಜ್ಯವೇ ಮಿಗಿಲು. ಅದಕ್ಕಿಂತಲೂ ಮಿಗಿಲಾದದ್ದು ಇನ್ನಾವುದಿದೆ ಈ ದಿವ್ಯ ಭವ್ಯ ಸೃಷ್ಟಿಯಲ್ಲಿ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021